ಹೊಸದಿಲ್ಲಿ, ಮೇ 14 : ಮಂಗಳವಾರದಿಂದ ದೇಶದ ಆಯ್ದ ಮಾರ್ಗಗಳಲ್ಲಿ ರೈಲು ಸಂಚಾರ ಸೇವೆ ಪುನಾರಾರಂಭಗೊಂಡಿದೆ. ಭಾರತೀಯ ರೈಲ್ವೆ, ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕೆಂದು ಆದೇಶಿಸಿದೆ. ಈ ಮೊದಲು ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಪೂರ್ವ ಷರತ್ತು ಅಲ್ಲ ಎಂದು ಹೇಳಿದ್ದ ರೈಲ್ವೆ ಇಲಾಖೆ, ಇದೀಗ ಪ್ರಯಾಣಿಕರ ಮೊಬೈಲ್ ನಲ್ಲಿ ಈ ಆ್ಯಪ್ ಇಲ್ಲದಿದ್ದರೆ ಅವರನ್ನು ರೈಲಿನೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ತಿಳಿಸಿದೆ.
ರೈಲ್ವೆ ವಕ್ತಾರ ಆರ್.ಡಿ. ಬಾಜಪೇಯಿ ಅವರು ಈ ಬಗ್ಗೆ ಮಾತನಾಡಿದ್ದು, ಆನ್ ಲೈನ್ ಟಿಕೆಟ್ ಬುಕ್ ಮಾಡಬೇಕಾದಲ್ಲಿ ಮೊಬೈಲ್ ಫೋನ್ ಸಂಖ್ಯೆ ಇರಲೇಬೇಕು. ಹಾಗಾಗಿ ಆನ್ ಲೈನ್ ಟಿಕೆಟ್ ತೋರಿಸಲು ಪ್ರತಿಯೊಬ್ಬರು ಮೊಬೈಲ್ ತರುತ್ತಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸೇತು ಆ್ಯಪ್ ಕಡ್ಡಾಯ ಮಾಡಿದ್ದು, ಪ್ರತಿಯೊಬ್ಬರು ಅದನ್ನು ನಿಲ್ದಾಣಕ್ಕೆ ಬರುವ ಮೊದಲೇ ಡೌನ್ ಲೋಡ್ ಮಾಡಿರಬೇಕು ಎಂದರು.
ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!
ಲಿಯೊನಾಲ್ ಮೆಸ್ಸಿ.. ಫುಟ್‍ಬಾಲ್ ಜಗತ್ತಿನ ಅಪ್ರತಿಮ ಹಾಗೂ ಸರ್ವಶ್ರೇಷ್ಠ ಆಟಗಾರ.. ಅರ್ಜೆಂಟಿನಾದ ದಂತಕಥೆ.. ವಿಶ್ವ ಫುಟ್‍ಬಾಲ್ ಕ್ಲಬ್‍ಗಳ ಸೂಪರ್ ಡೂಪರ್ ಪ್ಲೇಯರ್.. ಕೋಟ್ಯಂತರ ಅಭಿಮಾನಿಗಳ ಎವರ್ ಗ್ರೀನ್...








