ಹೊಸ ವರ್ಷಕ್ಕೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸೆಲೆಬ್ರೇಷನ್ ಗೆ ಬ್ರೇಕ್ New Year saaksha tv
ಬೆಂಗಳೂರು : ನಾಳೆಯಿಂದ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ಹೊಸ ವರ್ಷಕ್ಕೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸೆಲೆಬ್ರೇಷನ್ ಗೆ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ.
ನಾಳೆ ರಾತ್ರಿ 10 ಗಂಟೆ ಬಳಿಕ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸ್ತಬ್ಧವಾಗಲಿದೆ.
ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ ಮಾಡಿದೆ.
ಹೀಗಾಗಿ ನಗರದಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಎಂಜಿ ರೋಡ್ ಸುತ್ತಮುತ್ತ 100ಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆಗೆ ಸಿದ್ದತೆ ನಡೆದಿದೆ.
ಎಂಜಿ ರೋಡ್ ಸುತ್ತಮುತ್ತ ಬ್ಯಾರಿಕೇಡ್ ಗಳ ನಿರ್ಮಾಣ ಮಾಡಿ ಪರಿಶೀಲನೆ ನಡೆಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಅಲ್ಲದೆ ರಾತ್ರಿ ಹತ್ತು ಗಂಟೆ ಬಳಿಕ ನೈಟ್ ಕರ್ಪ್ಯೂ ಇರೋದ್ರಿಂದ ಪಬ್, ಬಾರ್ ರೆಸ್ಟೋರೆಂಟ್ ಕ್ಲೋಸ್ ಮಾಡಿಸಲು ಪೊಲೀಸರ ಚಿಂತನೆ ಮಾಡಿದ್ದಾರೆ.









