ಹೊಸದಿಲ್ಲಿ, ಮೇ 14 : ಹೊಸದಿಲ್ಲಿ, ಮೇ 14: ಕೇಂದ್ರ ಆರೋಗ್ಯ ಸಚಿವಾಲಯವು ಕೊರೊನಾ ವೈರಸ್ ಸಮುದಾಯಿಕ ಮಟ್ಟದಲ್ಲಿ ಹರಡಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲಿದೆ. ಈ ಬಗ್ಗೆ ಮಾರ್ಗಸೂಚಿಯನ್ನು ಎಲ್ಲಾ ಜಿಲ್ಲೆಗಳಿಗೆ ರವಾನಿಸಿದ್ದು, ಪ್ರತಿ ಜಿಲ್ಲೆಯಲ್ಲಿ ತಿಂಗಳಿಗೆ 800 ಮಂದಿಯ ಕೊರೋನಾ ಸೋಂಕು ಪರೀಕ್ಷೆ ನಡೆಯಲಿದೆ. ಇದಕ್ಕಾಗಿ ಪ್ರತಿ ಜಿಲ್ಲೆ 10 ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಬೇಕು ಮತ್ತು 10 ಆರೋಗ್ಯ ಕೇಂದ್ರಗಳಲ್ಲಿ 6 ಕೇಂದ್ರಗಳು ಸರಕಾರಿ ಸ್ವಾಮ್ಯದಾಗಿರಬೇಕು. ಗಂಟಲು ದ್ರವ ಪರೀಕ್ಷೆಯ ಮೂಲಕ ಜಿಲ್ಲೆಯ ಜನರಿಗೆ ಕೊರೊನಾ ಸೋಂಕು ತಗುಲಿದೆಯೇ ಎಂದು ಪರೀಕ್ಷಿಸಿದರೆ, ರಕ್ತ ಪರೀಕ್ಷೆಯ ಮೂಲಕ ಈ ಮೊದಲು ಸೋಂಕು ತಗುಲಿ ಅವರು ಗುಣಮುಖರಾಗಿದ್ದಾರೆಯೇ ಎಂದು ಪರಿಶೀಲಿಸಬೇಕು. ರಕ್ತ ಪರೀಕ್ಷೆಯಲ್ಲಿ ದೇಹದಲ್ಲಿ ಪ್ರತಿಕಾಯಗಳು ಪತ್ತೆಯಾದರೆ, ಅವರಿಗೆ ಈ ಮೊದಲು ಸೋಂಕು ತಗುಲಿದ್ದು, ಅವರು ಅದರ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ ಎಂದು ಅರ್ಥ.
ಮೇಕೆದಾಟು ತಡೆದರೆ ತಮಿಳುನಾಡಿಗೆ ಒಂದು ಹನಿ ನೀರು ಸಿಗಲ್ಲ: ತಮಿಳುನಾಡಿನ ಮೊಂಡುತನಕ್ಕೆ ಕರ್ನಾಟಕ ಕೊಡಲಿದೆಯೇ ತಿರುಗೇಟು?;ಸಚಿವ ರಾಮಲಿಂಗಾರೆಡ್ಡಿ ನೀಡಿದ ಎಚ್ಚರಿಕೆ ಹಿಂದಿರುವ ಗುಟ್ಟೇನು?
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ಅನಗತ್ಯವಾಗಿ ಅಡ್ಡಿಪಡಿಸುತ್ತಿರುವುದಕ್ಕೆ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು...








