ಹಿಮಾಚಲ ಪ್ರದೇಶ – ತಿಂಗಳಲ್ಲಿ ಮೂರನೇ ಭಾರಿ ಕಂಪಸಿದ ಭೂಮಿ
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ತಿಂಗಳಲ್ಲಿ ಮೂರನೆ ಭಾರಿ ಭೂಮಿ ಕಂಪಿಸುತ್ತಿದ್ದು ಜನತೆ ಆತಂಕದಲ್ಲಿದ್ದಾರೆ. ಬೆಳಿಗ್ಗೆ 11.07 ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ಕುಲುವಿನಲ್ಲಿ 10 ಕಿಲೋಮೀಟರ್ ಆಳದಲ್ಲಿದೆ.
ಹಿಮಾಚಲ ಪ್ರದೇಶದ ಜನರು ಈ ತಿಂಗಳಲ್ಲಿ ಮೂರನೇ ಬಾರಿ ಭೂಕಂಪನದ ಅನುಭವಕ್ಕೆ ಒಳಗಾಗಿದ್ದಾರೆ. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಸೋಮವಾರ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ 2.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಡಿ.22ರಂದು ಇದೇ ಜಿಲ್ಲೆಯಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಹಿಮಾಚಲ ಪ್ರದೇಶದ ಹೆಚ್ಚಿನ ಭಾಗಗಳು ಅತ್ಯಂತ ಸೂಕ್ಷ್ಮವಾದ ಭೂಕಂಪನ ವಲಯಕ್ಕೆ ಸೇರಿವೆ. ಮತ್ತು ರಾಜ್ಯವು ಪ್ರತಿ ಬಾರಿಯೂ ಲಘು ಭೂಕಂಪಗಳಿಗೆ ಒಳಗಾಗುತ್ತಿರುತ್ತದೆ. ಕಳೆದ ತಿಂಗಳು ರಾಜ್ಯದ ಕಿನ್ನೌರ್ ಜಿಲ್ಲೆಯಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು.+
ಹಿಮಾಲಯ ಪ್ರದೇಶವು 4 ಏಪ್ರಿಲ್, 1905 ರಂದು ಇಲ್ಲಿಯವರೆಗಿನ ಅತಿದೊಡ್ಡ ಭೂಕಂಪವನ್ನು ಎದುರಿಸಿತು, 20,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಅಂದು 7.8 ತೀವ್ರತೆಯ ಭೂಮಿ ಕಂಪಿಸಿತ್ತು. ಕಂಗ್ರಾ ಕಣಿವೆಯಲ್ಲಿ ಹಲವಾರು ಕಟ್ಟಡಗಳು ನಾಶವಾಗಿ ಆಸ್ತಿ ಜೊತೆ ಜೀವ ಹಾನಿಯೂ ಉಂಟಾಗಿತ್ತು..








