ದೇಶದಲ್ಲಿ ನಿನ್ನೆ 9,195 ಕೋವಿಡ್ ಪ್ರಕರಣ ದೃಢ : 781 ಕ್ಕೆ ಏರಿದ ಒಮಿಕ್ರಾನ್ ಸಂಖ್ಯೆ
ದೇಶದಲ್ಲಿ ನಿನ್ನೆ 9,195 ಕೋವಿಡ್ ಪ್ರಕರಣ ದಾಖಲಾಗಿದೆ. ಕೊರೊನಾ ವೈರಸ್ನ ರೂಪಾಂತರಿ ತಳಿ ಓಮೈಕ್ರಾನ್ ಸೋಂಕು ಪ್ರಕರಣಗಳು ದೇಶದಲ್ಲಿ ಏರಿಕೆಯಾಗ್ತಲೇ ಇದೆ.. ದೇಶದಲ್ಲಿ ಒಟ್ಟು 781 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಪ್ರತಿ ಮೂರು ದಿನಗಳಿಗೆ ಒಮ್ಮೆ ಒಮಿಕ್ರಾನ್ ಪ್ರಕರಣಗಳು ದುಪ್ಪಟ್ಟಾಗ್ತಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.. ಇದೇ ಅವಧಿಯಲ್ಲಿ 241 ಮಂದಿ ಒಮಿಕ್ರಾನ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ..
ನಿನ್ನೆ 302 ಮಂದಿ ಮಹಾಮಾರಿಯಿಂದ ಉಸಿರು ನಿಲ್ಲಿಸಿದ್ದಾರೆ.. ಒಟ್ಟು ಸಾವಿನ ಸಂಖ್ಯೆ 34,808,886 ಕ್ಕೆ ತಲುಪಿದೆ. ಇದೇ ಅವಧಿಯಲ್ಲಿಯೇ 7,347 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ..
ದೇಶದಲ್ಲಿ ಈ ವರೆಗೆ 3,42,51,292 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 77,002 ಸಕ್ರಿಯ ಪ್ರಕರಣಗಳು ಭಾರತದಲ್ಲಿವೆ.