ಏಕಕಾಲದಲ್ಲಿ ಧೋನಿ, ಸಹಾ ದಾಖಲೆ ಉಡೀಸ್..! MS Dhoni saaksha tv
ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಟೆಸ್ಟ್ ನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್ ಟೆಂಬಾ ಬೌಮಾ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಕೀಪರ್ ಆಗಿ ತಮ್ಮ 100 ನೇ ಕ್ಯಾಚ್ ಪಡೆದರು.
ಇದರೊಂದಿಗೆ ಟೆಸ್ಟ್ ನಲ್ಲಿ 100 ಕ್ಯಾಚ್ ಗಳನ್ನ ಪಡೆದ ಪಂತ್, ಧೋನಿ, ಸಹಾ ಸಾಲಿಗೆ ಸೇರಿದ್ದಾರೆ. ಪಂತ್ ಕೇವಲ 26 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇತ್ತ ಮಹೇಂದ್ರ ಸಿಂಗ್ ಧೋನಿ, ವೃದ್ಧಿಮಾನ್ ಸಮನಾಗಿ 36 ಟೆಸ್ಟ್ ಪಂದ್ಯಗಳಲ್ಲಿ 100 ಕ್ಯಾಚ್ ಗಳನ್ನು ಹಿಡಿದಿದ್ದರು.
ಇನ್ನ ಒಟ್ಟಾರೆ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಪರ ಧೋನಿ 294 ಕ್ಯಾಚ್ ಗಳನ್ನು ಹಿಡಿದು ಮೊದಲ ಸ್ಥಾನದಲ್ಲಿದ್ದಾರೆ.
ಸೈಯಾದ್ ಕಿರ್ಮಾಣಿ 198, ಕಿರಣ್ ಮೊರೆ 130, ನಯನ್ ಮೊಂಗಿಯಾ 107, ವೃದ್ಧಿ ಮಾನ್ ಸಹಾ 104 ನಂತರದ ಸ್ಥಾನಗಳಲ್ಲಿದ್ದಾರೆ.









