ನಂದಿಗುಡ್ಡೆ ಕೊರಗಜ್ಜ ದೈವಸ್ಥಾನ ಕಟ್ಟೆಯಲ್ಲಿ ಕಾಂಡೋಮ್ ಪತ್ತೆ : ತಪ್ಪೊಪ್ಪಿಕೊಂಡ ಆರೋಪಿ ದೇಸಾಯಿ Nandigudde Koragajja saaksha tv
ಮಂಗಳೂರು : ನಂದಿಗುಡ್ಡೆ ಕೊರಗಜ್ಜ ದೈವಸ್ಥಾನ ಕಟ್ಟೆಯಲ್ಲಿ ಕಾಂಡೋಮ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧಾರಿಸಿ ಆರೋಪಿಯನ್ನು ಬಂಧಿದ್ದಾರೆ.
ಕೋಟೆಕಾರು ಕೊಂಡಾಣ ನಿವಾಸಿ ದೇವದಾಸ್ ದೇಸಾಯಿ ಬಂಧಿತ ಆರೋಪಿಯಾಗಿದ್ದು, ಈತ ತಾನೇ ಈ ಕೆಲಸ ಮಾಡಿದ್ದಾರೆ ತಪ್ಪೊಪ್ಪಿಕೊಂಡಿದ್ದಾನೆ.
ಬಂಧಿತ ಆರೋಫಿ ದೇವದಾಸ್ ದೇಸಾಯಿ ಮೂಲತಃ ಹುಬ್ಬಳ್ಳಿಯವರಾಗಿದ್ದು, ಕಳೆದ 24 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿರುವುದಾಗಿ ಹೇಳಿಕೊಂಡಿದ್ದಾನೆ.
ಡಿಸೆಂಬರ್ 28 ರಂದು ನಗರದ ನಂದಿಗುಡ್ಡೆಯಲ್ಲಿರುವ ಕೊರಗಜ್ಜ ದೈವಸ್ಥಾನದ ಕಟ್ಟೆಯ ಮೇಲೆ ಕಾಂಡೋಮ್ ಪತ್ತೆಯಾಗಿತ್ತು.
ಈ ಸಂಬಂಧ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ತನಿಖೆ ನಡೆಸಿ ಆರೋಪಿ ದೇವದಾಸ್ ದೇಸಾಯಿ ಎಂಬುವವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು.
ಈ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿ, ಇದೇ ರೀತಿಯಾಗಿ ವಿವಿಧೆಡೆ 18 ದೈವಸ್ಥಾನ, ಕೊರಗಜ್ಜ ಕಟ್ಟೆ, ಮಸೀದಿಯ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರಗಳನ್ನು ಹಾಕಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.