ತಾಯಿಯ ಮೇಲೆ ಹಲ್ಲೆ ಮಾಡಿದಕ್ಕೆ ಸಂಬಂಧಿಯನ್ನ ಕೊಲೆ ಮಾಡಿದ ಹುಡುಗಿಯರು
ಕೇರಳ : ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದ ವ್ಯಕ್ತಿಯನ್ನ ಬಾಲಕಿಯರಿಬ್ಬರೂ ಸೇರಿ ಕೊಲೆ ಮಾಡಿ , ಬಳಿಕ ತಾವೇ ಖುದ್ದು ತೆರಳಿ ಪೊಲೀಸರಿಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.. 70 ವರ್ಷದ ಮಹಮ್ಮದ್ ಕೋಯಾ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ ಮೃತನ ಕುಟುಂಬ ಹಾಗೂ ಕೊಲೆ ಮಾಡಿದ ರೋಪಿಗಳ ಕುಟುಂಬ ಟ್ಟಾಗಿ ಒಂದೇ ಮನೆಯಲ್ಲಿ ವಾಸವಾಗಿದ್ದರು..
ಸದಾ ಇವರ ಮನೆಯಲ್ಲಿ ಗಲಾಟೆಯಾಗುತ್ತಲೇ ಇತ್ತು.. ಇತ್ತೀಚೆಗೆ ಕೋಯಾ ಬಾಲಕಿಯರ ತಾಯಿಗೆ ಹೊಡೆಯುತ್ತಿದ್ದಾಗ ಬಾಲಕಿಯರು ಎಷ್ಟೇ ತಡೆದ್ರೂ ಆತ ಹೊಡೆಯುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ಕೋಪಗೊಂಡ ಹುಡುಗಿಯರು ಆತನನ್ನ ಕೊಡಲಿಯಿಂದ ಹೊಡೆದು ಕೊಂದು ಬಳಿಕ ಶವವನ್ನು ಬಾವಿಗೆ ಎಸೆದಿದ್ದಾರೆ.
ಆದ್ರೆ ಘಟನೆಯಿಂದ ಭಯಭೀತರಾಗಿದ್ದ ಬಾಲಕಿಯರು ಖುದ್ದು ತಾವೇ ತೆರಳಿ ಪೊಲೀಸರಿಗೆ ಶರಣಾಗಿದ್ದಾರೆ.. ಪ್ರಕರಣ ದಾಖಲಿಸಿಕೊಂಡು ಬಾವಿಯಿಂದ ಶವ ಹೊರತೆಗೆದು ಅದನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.. ವಯನಾಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.








