ಮಾರ್ಕೊ ಜಾನ್ಸೆನ್ ಮತ್ತು ವಿರಾಟ್ ಕೊಹ್ಲಿ ಫ್ಲ್ಯಾಶ್ ಬ್ಯಾಕ್ Virat Kohli saaksha tv
ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸೆನ್ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದಾರೆ.
20 ವರ್ಷದ ಜಾನ್ಸೆನ್ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ನೊಂದಿಗೆ ಟೆಸ್ಟ್ ಗೆ ಪಾದರ್ಪಣೆ ಮಾಡಿರುವ ಜಾನ್ಸೆನ್ ಎರಡೂ ಇನ್ನಿಂಗ್ಸ್ ಗಳಲ್ಲಿ ಸೇರಿ ಐದು ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕೂಡ ಇದೆ.
ಇದೇನು ಜೆನ್ಸನ್ ಬಗ್ಗೆ ವಿರಾಟ್ ಕಥೆ ಯಾಕೆ ಅಂದ್ರೆ.. ಅದಕ್ಕೆ ಕಾರಣ ಇದೆ.
Yet another ill-fated cover drive by Virat Kohli ❌
For the second year in a row, Kohli makes no international 💯 as the long wait stretches 😬#SAvIND #WTC23 pic.twitter.com/6DKfExwWON
— CricWick (@CricWick) December 29, 2021
ಕಳೆದ 2018ರಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಗಮಿಸಿತ್ತು. ಆಗ ಮಾರ್ಕೊ ಜಾನ್ಸನ್ ದಕ್ಷಿಣ ಆಫ್ರಿಕಾಗೆ ನೆಟ್ ಬೌಲರ್ ಆಗಿದ್ದರು.
ಜಾನ್ಸನ್‌ಗೆ ಕೊಹ್ಲಿ ಎಂದರೆ ತುಂಬಾ ಇಷ್ಟ. ಟೀಂ ಇಂಡಿಯಾ ಅಭ್ಯಾಸದ ವೇಳೆ ಜಾನ್ಸನ್ ಕೊಹ್ಲಿಯನ್ನು ಭೇಟಿಯಾಗಿದ್ದ. ನಂತರ ಜಾನ್ಸನ್ ನೆಟ್ ಬೌಲರ್ ಆಗಿ ಕೊಹ್ಲಿಗೆ ಬೌಲ್ ಮಾಡಿದ್ದರು.
ಈ ವೇಳೆ ಜಾನ್ಸನ್ ಎಸೆತಗಳನ್ನು ಉತ್ತಮವಾಗಿ ಎದುರಿಸಿದ್ದು ವಿರಾಟ್, ಕೆಲವು ಬಾರಿ ಸೈಲೆಂಟ್ ಆಗಿದ್ದರು. ನಂತರ ಉಮೇಶ್ ಯಾದವ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಇದರೊಂದಿಗೆ ಜಾನ್ಸೆನ್ ’ಗುಡ್ ಬಾಲ್’ ಎಸೆದಿದ್ದಕ್ಕೆ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ಮಾರ್ಕೊ ಜಾನ್ಸನ್, ಕೊಹ್ಲಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ.
ಕಟ್ ಮಾಡಿದ್ರೆ ಸರಿಯಾಗಿ ಮೂರು ವರ್ಷಗಳ ನಂತರ ಈಗ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಜಾನ್ಸನ್ ತನ್ನ ನೆಚ್ಚಿನ ಕ್ರಿಕೆಟರ್ ವಿರಾಟ್ ವಿಕೆಟ್ ತೆಗೆದಿದ್ದಾನೆ. ಈ ಖುಷಿಯನ್ನು ಜಾನ್ಸನ್, ಟ್ವಿಟ್ಟರ್ ನಲ್ಲಿ ಕೊಹ್ಲಿ ಫೋಟೋ ಹಂಚಿಕೊಂಡು ವ್ಯಕ್ತಪಡಿಸಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ರೀತಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.