ಮಲೆನಾಡಲ್ಲಿ ಕಾಡಾನೆಗಳ ದಾಂಧಲೆ | ಭತ್ತದ ಗದ್ದೆ ನಾಶ Elephants saaksha tv
ಹಾಸನ : ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ.
ಸಕಲೇಶಪುರ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಫಿ ತೋಟದಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ.
ಅಲ್ಲದೇ ಗ್ರಾಮದಲ್ಲಿನ ಭತ್ತದ ಗದ್ದೆ ಸಂಪೂರ್ಣ ತುಳಿದು ನಾಶ ಮಾಡಿದೆ.
ಸುಮಾರು 30 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೆಳೆಯನ್ನು ನಾಶ ಮಾಡಿದೆ.
ಬೆಳೆ ಕಳೆದುಕೊಂಡ ರೈತ ಕಂಗಾಲಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.