ಅಪರಿಚಿತೆ ಎಂದುಕೊಂಡು ತನ್ನ ಮಗಳನ್ನೇ ಗುಂಡಿಟ್ಟು ಕೊಂದ ತಂದೆ
ಅಮೆರಿಕಾ : ತಂದೆಯೊಬ್ರು ತನ್ನ ಸ್ವಂತ ಮಗಳನ್ನೇ ಅಪರಿಚೆ ಎಂದುಕೊಂಡು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಅಮೆರಿಕಾದ ಓಹಿಯೋದಲ್ಲಿ ನಡೆದಿದೆ..
16 ವರ್ಷದ ಮಗಳು ಜಾನೆ ಹೇರ್‍ಸ್ಟನ್ ಅನುಮತಿ ಇಲ್ಲದೇ ಮನೆಗೆ ನುಗ್ಗಿದಳು ಎಂದು ತಪ್ಪಾಗಿ ಭಾವಿಸಿ ತಂದೆಯೇ ಗುಂಡಿಕ್ಕಿ ಕೊಂದಿದ್ದು , ನಂತರ ಮಗಳು ಅಂತ ಗೊತ್ತಾದ ತಕ್ಷಣ ಆಘಾತಕ್ಕೆ ಒಳಗಾಗಿದ್ದಾರೆ.. ಜಾನೆ ಹೇರ್‍ಸ್ಟನ್ ತಾಯಿ ತುರ್ತು ಸೇವೆಗೆ ಕರೆ ಮಾಡಿದ್ದಾಳೆ.
ಬಳಿಕ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.
ವರದಿಗಳ ಪ್ರಕಾರ, ಹೇರ್‍ಸ್ಟನ್ ತಮ್ಮ ಮನೆಗೆ ಹೋಗಿದ್ದಾಳೆ. ಈ ವೇಳೆ ಯಾರೋ ಅನುಮತಿ ಇಲ್ಲದೇ ನಮ್ಮ ಮನೆಗೆ ಬರುತ್ತಿದ್ದಾರೆ ಎಂದು ತಪ್ಪು ಭಾವಿಸಿದ ತಂದೆ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ.








