ಕೊರೊನಾ ಹೆಚ್ಚುತ್ತಿದ್ದೆ, ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರ Corona saaksha tv
ಬೆಂಗಳೂರು : ಕೊರೊನಾ ದೇಶದಲ್ಲಿ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಮಾತನಾಡಿ ಸಿಎಂ, ಇಡೀ ದೇಶದಲ್ಲಿ ಕೋವಿಡ್ ಜಾಸ್ತಿ ಆಗ್ತಿದೆ. ಬರುವ ದಿನಗಳಲ್ಲಿ ಕೇಸ್ ಗಳು ಯಾವ ರೀತಿ ಆಗ್ತಿವೆ, ನೋಡಿಕೊಂಡು ಕ್ರಮಗಳನ್ನು ಕೈ ಗೊಳ್ಳುತ್ತೇವೆ. ಔಷಧಿಗಳು, ಆರೋಗ್ಯ ವ್ಯವಸ್ಥೆ, ಬೆಡ್ ಗಳು, ಐಸಿಯುಗಳ ಸಿದ್ಧತೆಗೆ ಬರುವ ದಿನಗಳಲ್ಲಿ ಕ್ರಮ ಕೈಗೊಳ್ಳುಳ್ತೇವೆ. ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ದೇವಸ್ಥಾನಗಳಿಗೆ ಸ್ವಾತಂತ್ರ್ಯ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಡಿಕೆಶಿಗೆ ಬೆಕ್ಕಿನ ಕನಸಲ್ಲಿ ಇಲಿ ಎಂಬಂತಾಗಿದೆ. ನಾವು ದೇವಸ್ಥಾನಗಳನ್ನು ಯಾರಿಗೂ ಹಸ್ತಾಂತರ ಮಾಡುತ್ತಿಲ್ಲ. ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತ ಮಾಡುತ್ತೇವೆ. ಡಿಕೆಶಿ ಅವರ ಅಭಿಪ್ರಾಯ ಹಿಂದೂ ದೇವಸ್ಥಾನಗಳ ವಿರುದ್ಧ ಮತ್ತು ಹಿಂದೂ ಭಕ್ತರ ವಿರುದ್ಧ ಇರೋದು ಇದರಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.









