2022 ರಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಕನ್ನಡ ಚಿತ್ರಗಳು…
2021 ಮುಗಿದು 2022 ನ ಬರಮಾಡಿಕೊಂಡಿದ್ದೇವೆ…ಹೊಸ ಹೊಸ ಭರವಸೆಗಳನ್ನ ಸಹ ಕಾಣುತ್ತಿದ್ದೇವೆ. ಇಂಥದೆ ಭರವಸೆಯನ್ನ ಕನ್ನಡ ಚಿತ್ರರಂಗ ಕೂಡ ಕಾಣುತ್ತಿದೆ. 2021 ಚಂದನವನಕ್ಕೆ ಅಷ್ಟೇನು ಆಶಾದಾಯಕವಾಗಿರಲಿಲ್ಲ . ಮೊದಲ ಅರ್ಧ ವರ್ಷ ಕರೋನಾ ಎರಡನೇ ಅಲೆಗೆ ಕಳೆದು ಹೋದರೆ ಇನ್ನರ್ದ ವರ್ಷದಲ್ಲಿ ಆತಂಕದಿಂದಲೇ ಕಳೆದುಹೋಗಿದೆ. ಬಿಡುಗಡೆಯಾದ ಚಿತ್ರಗಳಲ್ಲಿ ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ ಗೆಲುವಿನ ಸಿಹಿ ಉಂಡಿವೆ. ಈ ವರ್ಷ ಬಿಡುಗಡೆಯಾಗಬೇಕಿದ್ದ ಬಹು ನೀರಿಕ್ಷಿತ ಚಿತ್ರಗಳಲ್ಲಿ ಕೆಲವು ಮುಂದಿನ ವರ್ಷಕ್ಕೆ ಮುಂದಕ್ಕೋಗಿವೆ…. 2022 ರಲ್ಲಾದರೂ ಸ್ಯಾಂಡಲ್ಹುಡ್ ನಲ್ಲಿ ಬ್ಲಾಕ್ ಬ್ಲಾಸ್ಟರ್ ಚಿತ್ರಗಳು ಬರಲಿ ಅಂತ ಆಶಿಸೋಣ.
ವಿಕ್ರಾಂತ್ ರೋಣ
2022 ರ ಬಹು ನಿರಿಕ್ಷಿತ ಚಿತ್ರಗಳಲ್ಲಲಿ ಮೊದಲು ಬಿಡುಗಡೆಗೆ ಸಜ್ಜಾಗಿ ನಿಂತಿರುವ ಚಿತ್ರ ವಿಕ್ರಾಂತ್ ರೋಣಾ ಚಿತ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದ್ದಿ ಅಭಿನಯದ ವಿಕ್ರಾಂತ್ ಸಿನಿಮಾ ಬಿಡುಗಡೆಯಾಗಿರುವ ಟೀಸರ್ ಮತ್ತು ಪೋಸ್ಟರ್ ನಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಮೊದಲ ಭಾರಿಗೆ ಕಿಚ್ಚ ಸುದೀಪ್ ಗೆ ನಿರ್ದೇಶನ ಮಾಡಿದ್ದು. ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಾಲಿವುಡ್ ಬೆಡಗಿ ಜಾಕ್ವೆಲ್ ಫರ್ನಾಂಡೀಸ್ ಗಡಗ್ ರಕ್ಕಮ್ಮ ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ರಾಂತ್ ರೋಣ 2022ರ ಫೆಬ್ರವರಿ 24 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರ 3ಡಿ ರೂಪದಲ್ಲಿಯೂ ಕಾಣಿಸಿಕೊಳ್ಲುತ್ತಿರುವುದು ವಿಶೇಷ…..
ಕೆಜಿಎಫ್ ಚಾಪ್ಟರ್ 2 …..
ಈ ಹೆಸರೆ ಸಾಕು ಭಾರತೀಯ ಚಿತ್ರರಂಗದಲ್ಲಿ ಈ ಸಿನಿಮಾಗೆ ನಿರೀಕ್ಷೆ ಎಷ್ಟಿದೆ ಎಂದು ತಿಳಿಸಲು ಇದು ಕೇವಲ ಕನ್ನಡದ ನಿರೀಕ್ಷೆಯ ಚಿತ್ರವಲ್ಲ ಭಾರತೀಯ ಸಿನಿರಂಗವೇ ಈ ಚಿತ್ರವನ್ನ ನೋಡಲು ಕಾತರದಿಮದ ಕಾಯುತ್ತಿದೆ… ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೆಜಿಎಫ್ ಪಾರ್ಟ 2 ಚಿತ್ರ 2022 ರ ಏಪ್ರಿಲ್ 14 ರಂದು ತೆರೆಗೆ ಬರಲು ರೆಡಿಯಾಗಿದೆ. ಈ ಚಿತ್ರದ ಮೂಲಕ ಯಶ್ ಬೆಳ್ಳಿ ತೆರೆಯ ಮೇಲೆ ಮತ್ತೊಂದು ಸಂಚಲನವನ್ನೆ ಉಂಟುಮಾಡಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬರೊಬ್ಬರಿ 100 ಕೋಟಿ ಬಡ್ಜೆಟ್ ನಲ್ಲಿ ಮೂಡಿ ಬರ್ತಿರೋ ಈ ವರ್ಷದ 2ನೇ ಬಹು ನಿಕ್ಷೆಯ ಚಿತ್ರ.
777ಚಾರ್ಲಿ
ರಕ್ಷಿತ್ ಶೆಟ್ಟಿ ಅಭಿನಯದ ಈ ವರ್ಷದ ಇನ್ನೊಂದು ಬಹು ನಿರೀಕ್ಷೆಯ ಚಿತ್ರ 777 ಚಾರ್ಲಿ . ಈ ಚಿತ್ರ ಸಹ 2021ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಬೇಕಿತ್ತು…ಓಮಿಕ್ರಾನ್ ಆತಂಕದ ಹಿನ್ನಲೆಯಲ್ಲಿ ಚಿತ್ರ ತಂಡ ಸಿನಿಮಾ ಬಿಡುಗಡೆಯನ್ನ ಮುಂದೂಡಿದೆ. ಪರಮ್ವ ಪ್ರೊಡಕ್ಷನ್ ಕಂಪನಿ ಚಿತ್ರ ನಿರ್ಮಿಸುತ್ತಿದ್ದು ,ಹೊಸ ನಿರ್ದೇಶಕ ಕಿರಣ್ ರಾಜ್ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ… ಚಿತ್ರದ ಮತ್ತೊಂದು ಆಕರ್ಷಣೆ ಇದರಲ್ಲಿ ಅಭಿನಯಸಿರುವ ನಾಯಿ ರಕ್ಷಿತ್ ಮತ್ತು ನಾಯಿ ಜೊತೆಗಿನ ಜುಗಲ್ಬಂದಿಯ ಟಾರ್ಚರ್ ಸಾಂಗ್ ರಿಲೀಸ್ ಆಗಿದ್ದು ನೋಡುಗರ ಮನಸೂರೆಗೊಳ್ಳುವಂತಿದೆ. ಈ ಚಿತ್ರ ಸಹ 2022 ರಲ್ಲಿ ಬಿಡುಗಡೆಯಾಗುತ್ತಿದ್ದು ದಿನಾಂಕವನ್ನ ಇನ್ನೂ ನಿಗದಿಗೊಳಿಸಿಲ್ಲ.
ಅಪ್ಪು ಅಭಿನಯದ ಕೊನೆ ಸಿನಿಮಾ ಜೇಮ್ಸ್
ಸ್ಯಾಂಡಲ್ವುಡ್ ನ ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮ ಜೇಮ್ಸ್. ಅಪ್ಪು ನಮ್ಮನೆಲ್ಲ ಅಗಲಿ ಎರಡು ತಿಂಗಳು ಕಳೆದು ಹೋಗಿದೆ. ಅಪ್ಪು ನಿಧನರಾಗುವ ಮುನ್ನ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದವು. ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಭಾಕಿ ಉಳಿದಿತ್ತು.ಆದರೂ ಚಿತ್ರ ನಿರ್ದೇಶಕ ಚೇತನ್ ಚಿತ್ರ ಬಿಡುಗಡೆಗೆ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರ ಅಪ್ಪು ಹುಟ್ಟು ಹಬ್ಬ ಅಂದರೇ ಮಾರ್ಚ್ 17 ರಂದು ತೆರೆಗೆ ಬರಲಿದೆ.








