ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನ ಕೊಲೆ Saaksha Tv
ಮಂಡ್ಯ: ಸೌದೆ ಕತ್ತರಿಸಲು ತೆಗೆದುಕೊಂಡು ಹೋಗಿದ್ದ ಮಚ್ಚುನ್ನು ವಾಪಸ್ ಕೊಡದಿದ್ದಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೆ ಏರಿ ಕೊಲೆಯಲ್ಲಿ ಅಂತ್ಯ ಕಂಡಿದೆ.
ಘಟನೆಯು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಗ್ರಾಮದಲ್ಲಿ ನಡೆದಿದೆ. ಮಚ್ಚಿನ ಏಟಿಗೆ ಮುತ್ತುರಾಜ್ (48) ಸಾವನ್ನಪ್ಪಿದ್ದಾನೆ. ಇವರ ಸಂಬಂಧಿಕರೊಬ್ಬರು 5 ದಿನಗಳ ಹಿಂದೆ ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕೆಂದು ಸೌದೆ ತರಲು ಮುತ್ತುರಾಜ್ ಅದೇ ಗ್ರಾಮದ ಸಂಜೀವಮೂರ್ತಿ ಬಳಿ ಮಚ್ಚು ತೆಗೆದುಕೊಂಡಿದ್ದ. ಆದರೆ ಕೆಲವು ದಿನಗಳಾದರು ಮಚ್ಚನ್ನು ವಾಪಸ್ ಕೊಟ್ಟಿರಲಿಲ್ಲ.
ಮಚ್ಚನ್ನು ಮರಳಿ ನೀಡುವಂತೆ ಸಂಜೀವಮೂರ್ತಿ ಮುತ್ತುರಾಜ್ ಕೇಳಿದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಕೊನೆಗೆ ಜಗಳ ತಾರಕಕ್ಕೇರಿ ಸಂಜೀವಮೂರ್ತಿ, ಮುತ್ತುರಾಜ್ ನ ಹೊಟ್ಟೆಯ ಭಾಗಕ್ಕೆ ಜೋರಾಗಿ ಚುಚ್ಚಿದ ಪರಿಣಾಮ ಅಲ್ಲೇ ಕುಸಿದು ಬಿದ್ದನು. ಈತನನ್ನು ಆಸ್ಪತ್ರೆಗೆ ಸೇರಿಸಲು ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಪೋಲಿಸರು ಘಟನೆಯ ಕುರಿತು ಪರಿಶೀಲನೆ ನಡೆಸಿದರು. ಹಲಗೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಆರೋಪಿ ಸಂಜೀವಮೂರ್ತಿಯನ್ನ ಪೋಲಿಸರು ಬಂದಿಸಿದರು.