ಬೀಜಿಂಗ್, ಮೇ 15 : ಕೊರೋನಾ ಸೋಂಕಿನ ತಾಯ್ನಾಡು ಚೀನಾದಲ್ಲಿ ಇದೀಗ ಮತ್ತೆ ಸೋಂಕಿನ ಭೀತಿ ಆವರಿಸಿದೆ. ಚೀನಾದ ಈಶಾನ್ಯ ಭಾಗದ ಜಿಲಿನ್ ಎಂಬ ನಗರ ಸೇರಿದಂತೆ ಹಲವೆಡೆ ಎರಡನೇ ಹಂತದ ಸೋಂಕು ವ್ಯಾಪಿಸುವಿಕೆ ಆರಂಭವಾಗಿದ್ದು, ಸಡಿಲಿಕೆಯಾಗಿದ್ದ ಲಾಕ್ ಡೌನ್ ಮತ್ತೆ ಜಾರಿಯಾಗುವಂತಿದೆ.
ನಗರಗಳ ಗಡಿಯನ್ನು ಮುಚ್ಚಲಾಗಿದ್ದು, ಜಿಲಿನ್ ನಲ್ಲಿ ಬಸ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ.
ಬುಧವಾರದಿಂದ ವುಹಾನ್ ನಲ್ಲಿ ಸುಮಾರು 11 ಲಕ್ಷ ಜನರ ಸಾಮೂಹಿಕ ಸೋಂಕು ಪತ್ತೆ ಪರೀಕ್ಷೆ ಪ್ರಾರಂಭವಾಗಿದೆ. ಈ ನಡುವೆ ಆರೋಗ್ಯ ಅಧಿಕಾರಿಗಳು ಗುರುವಾರ ಲಕ್ಷಣ ರಹಿತವಾದ ಸೋಂಕು ಇರುವ 12 ಪ್ರಕರಣಗಳು ಸೇರಿದಂತೆ ಹೊಸದಾಗಿ ಒಟ್ಟು 15 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ. ಲಕ್ಷಣರಹಿತ ಸೋಂಕು ಇರುವ ಸುಮಾರು 712 ಮಂದಿಯನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದ್ದು, ಸೋಂಕು ವ್ಯಾಪಿಸುವುದನ್ನು ನಿಯಂತ್ರಣ ಮಾಡಲು ಹೆಚ್ಚು ಕಟ್ಟುನಿಟ್ಟಾದ ಕ್ರಮಗಳನ್ನು ಅಧಿಕಾರಿಗಳು ಜಾರಿಗೆ ತಂದಿದ್ದಾರೆ.
ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ
ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಜಾತಶತ್ರು ಎಂದೇ ಕೀರ್ತಿ ಗಳಿಸಿದ್ದ, ರಾಜ್ಯದ ಹಿರಿಯ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪ ಅವರು ಇಂದು...








