ಹೊಸದಿಲ್ಲಿ, ಮೇ 15 : ಮೈಕ್ರೊಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್, ವಿಶ್ವವೇ ಕಂಗೆಟ್ಟಿರುವ ಕೊರೊನಾ ವೈರಸ್ ತಡೆಗಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಬಿಲ್ ಗೇಟ್ಸ್ ಅವರೊಂದಿಗೆ ಕೊರೊನಾ ವೈರಸ್ ತಡೆಗಟ್ಟಲು ಚರ್ಚೆಯನ್ನು ನಡೆಸಿದ್ದು, ಹಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ಕೊರೊನಾ ಸೋಂಕಿತರನ್ನು ಪತ್ತೆ ಮಾಡುವ ಸಲುವಾಗಿ ಭಾರತ ಅಭಿವೃದ್ದಿಪಡಿಸಿರುವ ಆರೋಗ್ಯ ಸೇತು ಆ್ಯಪ್ ನ ಪ್ರಯೋಜನವನ್ನು ವಿಶ್ವದಾದ್ಯಂತ ಪಡೆಯಬೇಕು ಎಂದು ತಮ್ಮ ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಜಗತ್ತಿನ ಪ್ರಯೋಜನಕ್ಕಾಗಿ ಭಾರತದ ಸಾಮರ್ಥ್ಯವನ್ನು ಹೇಗೆ ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು ಎಂಬ ಬಗ್ಗೆ ಪ್ರಧಾನಿ ಮತ್ತು ಬಿಲ್ ಗೇಟ್ಸ್ ವಿಚಾರ ವಿನಿಮಯ ಮಾಡಿಕೊಂಡಿದ್ದು, ಲಸಿಕೆ ಉತ್ಪಾದನೆ, ಚಿಕಿತ್ಸಾ ಉಪಕರಣಗಳ ಉತ್ಪಾದನೆ ಹೆಚ್ಚಿಸುವುದರ ಮುಖಾಂತರ ಭಾರತದ ಔಷಧೀಯ ಸಾಮರ್ಥ್ಯವನ್ನು ಕೂಡಾ ದೊಡ್ಡಮಟ್ಟದಲ್ಲಿ ಹೆಚ್ಚಿಸುವ ಬಗ್ಗೆ ಉಭಯತ್ರರು ಚರ್ಚೆ ನಡೆಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ವಿಶೇಷವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ನೆರವಾಗುವ ನಿಟ್ಟಿನಲ್ಲಿ ಭಾರತದ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುವ ಬಗ್ಗೆ ಪ್ರಧಾನಿ ಮೋದಿ ಹಾಗೂ ಬಿಲ್ ಗೇಟ್ಸ್ ಸಹಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ, ಕೊರೊನೋತ್ತರ ಬದುಕಿನ ಜೀವನ ವಿಧಾನ, ಆರೋಗ್ಯದಲ್ಲಿ ಆಗಬೇಕಾಗಿರುವ ಬದಲಾವಣೆಗಳ ಅಗತ್ಯ, ಶಿಕ್ಷಣ ಸೇವೆ, ಆರ್ಥಿಕ ಸಂಘಟನೆ ಬಗೆಗಿನ ವಿಶ್ಲೇಷಣೆಯ ನೇತೃತ್ವವನ್ನು ಗೇಟ್ಸ್ ಫೌಂಡೇಶನ್ ವಹಿಸಿಕೊಳ್ಳಬೇಕು ಎಂದು ಬಿಲ್ ಗೇಟ್ಸ್ ಅವರಲ್ಲಿ ಕೇಳಿಕೊಂಡಿದ್ದಾರೆ. ಬಿಲ್ ಗೇಟ್ಸ್ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುವ ಮಿಲಿಂದಾ ಗೇಟ್ಸ್ ಫೌಂಡೇಶನ್ ನ ಅಧ್ಯಕ್ಷರೂ ಆಗಿದ್ದಾರೆ.
ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್
ಬೆಂಗಳೂರು: ರಾಜಕಾರಣದಲ್ಲಿ ಕೆಲಸ ಆಗಬೇಕೆಂದರೆ ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಬಳಸಬೇಕು ಎಂಬ ಮಾತಿದೆ. ಆದರೆ, ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್...








