ವರ್ಷದ ಮೊದಲ ದಿನವೆ ಇಸ್ರೆಲ್ – ಹಮಾಸ್ ನಡುವೆ ರಾಕೆಟ್ ದಾಳಿ
ಇಸ್ರೇಲ್ ಮತ್ತು ಹಮಾಸ್ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚುತ್ತಿದೆ. ಹೊಸ ವರ್ಷದ ಮೊದಲ ದಿನದಂದು ಹಮಾಸ್ ತನ್ನ ವಸತಿ ಪ್ರದೇಶಗಳ ಮೇಲೆ ರಾಕೆಟ್ ದಾಳಿ ನಡೆಸಿದೆ ಎಂದು ಇಸ್ರೇಲ್ ಆರೋಪಿಸಿದೆ. ಕೆಲವು ಗಂಟೆಗಳ ನಂತರ, ಇಸ್ರೇಲಿ ಯುದ್ಧ ವಿಮಾನಗಳು ಗಾಜಾ ಪಟ್ಟಿಯ ಮೇಲೆ ಹಾರುತ್ತಿದ್ದವು. ಹಮಾಸ್ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ಬಾಂಬ್‌ಗಳನ್ನು ಹಾಕಲಾಗಿದೆ. ಗಾಜಾ ಪಟ್ಟಿಯಲ್ಲಿ ಎಷ್ಟು ಹಾನಿಯಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಗಾಜಾ ಪಟ್ಟಿಯ ಪ್ರದೇಶದಲ್ಲಿ ಬೆಂಕಿಯ ಜ್ವಾಲೆಗಳು ಸ್ಪಷ್ಟವಾಗಿ ಗೋಚರಿಸಿವೆ . ಈ ಬಗ್ಗೆ ಉಭಯ ಪಕ್ಷಗಳು ಯಾವುದೇ ಮಾಹಿತಿ ನೀಡಿಲ್ಲ.
ಇಸ್ರೇಲ್‌ನ ಕಡಲ ಗಡಿಗೆ ಸಮೀಪವಿರುವ ಸೆಂಟ್ರಲ್ ಪಾಯಿಂಟ್‌ನಲ್ಲಿ ಭಾನುವಾರ ಮುಂಜಾನೆ ಹಮಾಸ್ ರಾಕೆಟ್‌ಗಳನ್ನು ಹಾರಿಸಿತು. ಈ ವೇಳೆ ಕೆಲವರಿಗೆ ಗಾಯಗಳಾಗಿವೆ. ಇದಾದ ನಂತರ, ಇಸ್ರೇಲ್ ರಕ್ಷಣಾ ಸಚಿವಾಲಯ ಇದನ್ನು ದೇಶದ ಮೇಲೆ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾಗುತ್ತಿದ್ದು, ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಸ್ಪಷ್ಟವಾಗಿ ಹೇಳಿತ್ತು.
‘ಅರಬ್ ನ್ಯೂಸ್’ ವರದಿಯ ಪ್ರಕಾರ, ಇಸ್ರೇಲಿ ಯುದ್ಧವಿಮಾನಗಳು ಭಾನುವಾರ ಮಧ್ಯಾಹ್ನ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸಿವೆ. ವರದಿಯ ಪ್ರಕಾರ, ರಾಕೆಟ್‌ಗಳನ್ನು ತಯಾರಿಸುವ ಗಾಜಾ ಪಟ್ಟಿಯಲ್ಲಿರುವ ಹಮಾಸ್ ನೆಲೆಯನ್ನು ಗುರಿಯಾಗಿಸಿಕೊಂಡು ಇಸ್ರೆಲ್ ದಾಳಿ ಮಾಡಿದೆ. ಗಾಜಾ ಪಟ್ಟಿಯ ಪ್ರದೇಶದಲ್ಲಿ ಹಮಾಸ್ ದೊಡ್ಡ ಪ್ರಮಾಣದಲ್ಲಿ ರಾಕೆಟ್‌ಗಳನ್ನು ನಿರ್ಮಿಸುತ್ತಿದ್ದು, ಅವುಗಳನ್ನು ಇಸ್ರೇಲ್ ವಿರುದ್ಧದ ದಾಳಿಗೆ ಬಳಸಲಾಗುವುದು ಎಂದು ಇಸ್ರೇಲಿ ಗುಪ್ತಚರ ಇಲಾಖೆ ಕೆಲವು ದಿನಗಳ ಹಿಂದೆ ಸ್ಪಷ್ಟಪಡಿಸಿತ್ತು.