ರಾಜ್ಯದ ಬಿಜೆಪಿ ಪಕ್ಷ ದಿವ್ಯಾಂಗ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿದೆ. ಬೆಂಗಳೂರಿನ ಅರುಣ ಚೇತನ ದಿವ್ಯಾಂಗ ಶಾಲೆಗೆ ಅನುಕೂಲವಾಗಲಿ ಎಂದು ನೂತನ ಬಸ್ ಅನ್ನು ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಲೆಯ ಮುಖ್ಯರು ಆಗಿರುವ ಗಾ.ರ ಸುರೇಶ್ ಅವರಿಗೆ ವಾಹನದ ಪತ್ರಗಳನ್ನು ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಮಾಜಿ ಉಪಮಹಾಪೌರರಾದ ಹರೀಶ್, ರಾಜ್ಯ ಮಾಧ್ಯಮ ಸಂಚಾಲಕರಾದ ಎ . ಎಚ್. ಆನಂದ್ ಉಪಸ್ಥಿತರಿದ್ದರು.







