ದೈನಂದಿನ ಕೇಸ್ ಗಳಲ್ಲಿ ಮತ್ತೆ ಭಾರೀ ಏರಿಕೆ – 1700 ಕ್ಕೆ ತಲುಪಿದ ಒಮಿಕ್ರಾನ್ ಸಂಖ್ಯೆ
ದೇಶದಲ್ಲಿ ಇಂದು ಕೊರೊನಾ ಮಹಾಸ್ಪೋಟ – ತಿಂಗಳುಗಳ ಬಳಿಕ ಮತ್ತೆ 33 ಸಾವಿರ ದಾಟಿದ ದೈನಂದಿನ ಕೇಸ್ ಗಳು – 3ನೇ ಅಲೆ
ದೇಶದಲ್ಲಿ ಮತ್ತೆ ಕೊರೊನಾ ಮಹಾಸ್ಪೋಟವಾಗಿದೆ.. ತಿಂಗಳುಗಳಿಂದ 10 ಸಾವಿರದ ಒಳಗೆ ದಾಖಲಾಗುತ್ತಿದ್ದ ದೈನಂದಿನ ಕೇಸ್ ಗಳಲ್ಲಿ ಇಂದು ಧಿಢೀರ್ ಏರಿಕೆಯಾಗಿದ್ದು , ಕೋವಿಡ್ 3ನೇ ಅಲೆ ಜನರಲ್ಲಿ ಆತಂಕ ಮೂಡಿಸಿದೆ..
ಕಳೆದ 24 ಗಂಟೆಗಳಲ್ಲಿ 33,750 ಕೋವಿಡ್ ಪ್ರಕರಣಗಳು ದೃಢವಾಗಿವೆ. ಇದೇ ಅವಧಿಯಲ್ಲಿ 123 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಕಳೆದ ಶನಿವಾರ ದೇಶದಲ್ಲಿ 22,775 ಪ್ರಕರಣಗಳು ದೃಢವಾಗಿದ್ದವು. ಭಾನುವಾರ 27,553 ಪ್ರರಕಣಗಳು ಪತ್ತೆಯಾಗಿದ್ದವು. ಸೆ. 18ರ ನಂತರ ಭಾರತದಲ್ಲಿ ಇಷ್ಟು ಪ್ರಮಾಣದಲ್ಲಿ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು.
1,45,582 ಸಕ್ರಿಯ ಪ್ರಕರಣಗಳು ಭಾರತದಲ್ಲಿವೆ. ದೇಶದ ಒಟ್ಟಾರೆ ಸೋಂಕಿನ ಸಂಖ್ಯೆ 3,42,95,407ಕ್ಕೆ ತಲುಪಿದೆ. ಇನ್ನು ಸಾವಿನ ಒಟ್ಟು ಸಂಖ್ಯೆ 4,81,893ಕ್ಕೆ ಏರಿಕೆಯಾಗಿದೆ.
284 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಆ ಮೂಲಕ ಮೃತರ ಸಂಖ್ಯೆ 4,81,294ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಒಮಿಕ್ರಾನ್ ಆತಂಕವೂ ಕೂಡ ಹೆಚ್ಚಾಗಿದೆ.. ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 1 , 525 ಕ್ಕೆ ತಲುಪಿದೆ.. ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1700ಕ್ಕೆ ತಲುಪಿದೆ.