ಈಜಿಫ್ಟ್ ನಲ್ಲಿ ಶಾರುಕ್ ಖಾನ್ ಅಭಿಮಾನಿಗಳಿಗೆ ವಿಶೇಷ ಗೌರವ…
ಬಾಲಿವುಡ್ ನಟ ಶಾರುಕ್ ಖಾನ್ ಕಿಂಗ್ ಖಾನ್ ಅಂತಲೇ ಫೇಮಸ್, ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ತನ್ನ ಅಭಿಮಾನಿಗಳನ್ನ ಹೊಂದಿದ್ದಾರೆ. ವಿದೇಶದಲ್ಲೂ ಶಾರುಕ್ ಪ್ರಭಾವ ಎಷ್ಟಿದೆ ಎನ್ನುವುದನ್ನ ಪ್ರೊಫೆಸರ್ ಅಶ್ವಿನಿ ದೇಶಪಾಂಡೆ ವಿವರಿಸಿದ್ದಾರೆ.
ಅಶೋಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಅಶ್ವಿನಿ ದೇಶಪಾಂಡೆ ಟ್ವಿಟರ್‌ನಲ್ಲಿ ಈಜಿಪ್ಟ್‌ನಲ್ಲಿ ಟ್ರಾವೆಲ್ ಏಜೆಂಟ್‌ನೊಂದಿಗೆ ನಡೆದ ಮಾತುಕತೆಯನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಶಾರುಕ್ ಅಭಿಮಾನಿಯ ನಡುವಳಿಕೆ ಎಲ್ಲರ ಮನಗೆದ್ದಿದೆ.
“ಈಜಿಪ್ಟ್‌ನಲ್ಲಿರುವ ಟ್ರಾವೆಲ್ ಏಜೆಂಟ್‌ಗೆ ಹಣವನ್ನು ವರ್ಗಾಯಿಸುವ ಅವಶ್ಯಕತೆಯಿತ್ತು. ಆದರೆ ತಾಂತ್ರಿಕ ಸಮಸ್ಯೆಗಳಿಂದ ವರ್ಗಾವಣೆಯಲ್ಲಿ ಸಮಸ್ಯೆ ಉಂಟಾಯಿತು. ಆಗ ಬುಕಿಂಗ್ ಏಜೆಂಟ್ ಹೇಳಿದರು: ನೀವು ಶಾರುಕ್ ಖಾನ್ ದೇಶದವರು. ನಾನು ನಿಮ್ಮನ್ನು ನಂಬುತ್ತೇನೆ. ನಾನು ಬುಕಿಂಗ್ ಮಾಡುತ್ತೇನೆ, ನೀವು ನನಗೆ ಹಣವನ್ನ ಯಾವಾಗ ಬೇಕಾದರೂ ಪಾವತಿಸಿ. ಬೇರೆ ಯಾರಿಗೂ ನಾನು ಈ ರೀತಿ ಮಾಡುವುದಿಲ್ಲ, ಶಾರುಕ್ ಮೇಲಿನ ಅಭಿಮಾನದಿಂದ ಮಾಡುತ್ತಿದ್ದೇನೆ. ಶಾರುಕ್ ನಿಜಕ್ಕೂ ಕಿಂಗ್ ಎಂದು ಟ್ವೀಟ್ ಮಾಡಿದ್ದಾರೆ.
Needed to transfer money to a travel agent in Egypt. Was having problems with the transfer. He said: you are from the country of @iamsrk. I trust you. I will make the booking, you pay me later. For anywhere else, I wouldn't do this. But anything for @iamsrk. & he did!#SRK is 👑
— Ashwini_Deshpande (@_ADeshpande) December 31, 2021
ಅಶ್ವಿನಿ ದೇಶಪಾಂಡೆ ಬರೆದುಕೊಂಡಿರುವ ಈಜಿಫ್ಟ್ ಅಭಿಮಾನಿಯ ಟ್ವೀಟ್ ವೈರಲ್ ಆಗಿದೆ. ಶಾರುಕ್ ಖಾನ್ ಸದ್ಯ ಪಠಾಣ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.








