‘ರಾಧೆ ಶ್ಯಾಮ್’ ಗೆ 350 ಕೋಟಿ ರೂ. ಆಫರ್ ಕೊಟ್ಟ OTT
ಹೈದ್ರಾಬಾದ್ : ಬಾಹುಬಲಿ ಸಿನಿಮಾ ಮೂಲಕ ಭಾರತದ ಬಿಗ್ ಸ್ಟಾರ್ ಗುರುತಿಸಿಕೊಂಡಿರುವ ಪ್ರಭಾಸ್ ಅವರ ನಟನೆಯ ರಾಧೆ ಶ್ಯಾಮ್ ಸಿನಿಮಾ ಜನವರಿ 14 ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.. ಆದ್ರೆ ಪ್ರಸ್ತುತ ಭಾರತದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆ ಏರಿಕೆಯಾಗ್ತಿರೋದು , ಜೊತೆಗೆ ಒಮಿಕ್ರಾನ್ ಸ್ಥಿತಿ ನಮೋಡ್ತಿದ್ರೆ , RRR ಮಾದರಿಯಲ್ಲೇ ರಾಧೆಶ್ಯಾಮ್ ರಿಲೀಸ್ ದಿನಾಂಕ ಮುಂದೂಡಿಕೆಯಾದ್ರೂ ಆಶ್ಚರ್ಯವೇನಿಲ್ಲ..
ಈ ನಡುವೆ ಖ್ಯಾತ ಒಟಿಟಿ ಪ್ಲಾಟ್ ಫಾರ್ಮ್ ಪೂಜಾ ಹೆಗ್ಡೆ ಹಾಗೂ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಸಿನಿಮಾದ ಎಕ್ಸ್ಲೂಸಿವ್ ರೈಟ್ಸ್ ಗಾಗಿ 350 ಕೋಟಿ ಆಫರ್ ನೀಡಿರೋದಾಗಿ ವರದಿಯಾಗಿದೆ.. ಅಂದ್ಹಾಗೆ ಅಮೇಜಾನ್ ಪ್ರೈಮ್ ಈ ಆಫರ್ ಕೊಟ್ಟಿದ್ಯಂತೆ..
ಅಷ್ಟೇ ಅಲ್ಲ ಕೆಲ ದಿನಗಳ ಹಿಂದೆಯೇ ನೆಟ್ ಫ್ಲಿಕ್ಸ್ ಕೂಡ ಸಿನಿಮಾಗೆ 300 ಕೋಟಿಯ ಆಫರ್ ನೀಡಿದ್ದಾಗಿ ಸುದ್ದಿಯಾಗಿತ್ತು.. ಇದ್ರಿಂದಾಗಿ ಅಭಿಮಾನಿಗಳು ಸ್ವಲ್ಪ ಆತಂಕದಲ್ಲಿದ್ದಾರೆ.. ಸಿನಿಮಾ ಥತಿಯೇಟರ್ ನಲ್ಲೇ ಗ್ರ್ಯಾಂಡ್ ಆಗಿ ಸಿನಿಮಾ ವೆಲ್ ಕಮ್ ಮಾಡಿಕೊಳ್ಬೇಕು ಅಂತಿದ್ದ ಫ್ಯಾನ್ಸ್ ನಿರಾಸೆಯಾಗೋ ಅವಶ್ಯಕತೆಯಿಲ್ಲ.. ಯಾಕಂದ್ರೆ ರಾಧೆ ಶ್ಯಾಮ್ ಸಿನಿಮಾ ಥಿಯೇಟರ್ ನಲ್ಲೇ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ..
ಇಂತಹ ರೋಚಕತೆ ಜೊತೆಗೆ , ರೋಮ್ಯಾಂಟಿಂಕ್ ಥ್ರಿಲ್ಲಿಂಗ್ ಅನುಭೂತಿ ನೀಡುವ ಡ್ರಾಮ್ಯಾಟಿಕ್ ಪ್ಯಾಕೇಜ್ ಸಿನಿಮಾಗಳು ಚಿತ್ರಮಂದಿರಗಳಲ್ಲಿಯೇ ರಿಲೀಸ್ ಆಗಲು ಅರ್ಹವಾಗಿವೆ ಎಂದು ಮೇಕರ್ಸ್ ನಂಬಿದ್ದಾರೆ. ಬಾಹುಬಲಿ ಬಿಡುಗಡೆಯ ನಂತರ ಪ್ರಭಾಸ್ ಅವರ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ.. ಚಿತ್ರವು ಜನವರಿ 14 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಈಗ ರಿಲೀಸ್ ಡೇಟ್ ಮುಂದೂಡಲಾಗಿದೆ ಎಂದು ವರದಿಯಾಗಿದೆ.