ಅತ್ತೆಯನ್ನ ಸ್ಕ್ರೂಡ್ರೈವರ್ ನಿಂದ ಕೊಂದ ಸೊಸೆ
ಚೆನ್ನೈ : ಸೊಸೆಯೊಬ್ಬಳು ತನ್ನ ಅತ್ತೆಯನ್ನ ಸ್ಕ್ರೂ ಡ್ರೈವರ್ ನಿಂದ ಕೊಂದು ಮೃತದೇಹಕ್ಕೆ ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನ ವಿಶ್ವಾಸ್ ನಗರದಲ್ಲಿ ನಡೆದಿದೆ.. ಅತ್ತೆಯನ್ನ ಕೊಂದು ಬಳಿಕ ಅವರು ಬೆಂಕಿ ಅನಾಹುತದಲ್ಲಿ ಸಾವನಪ್ಪಿರುವಂತೆ ಬಿಂಬಿಸಲು ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿದೆ..
ನವೀನಾ (46) ಮೃತ ಅತ್ತೆಯಾಗಿದ್ದಾರೆ. 27 ವರ್ಷದ ರೇಷ್ಮಾ ಅತ್ತೆಯನ್ನು ಕೊಂದ ಸೊಸೆಯಾಗಿದ್ದಾಳೆ.. ನವೀನಾ ತಾಯಿ ಎಸ್.ಶಕಿಂಶಾ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಗಳು ಬೆಂಕಿಯಿಂದ ಸುಟ್ಟ ಗಾಯದಿಂದ ಸತ್ತಿದ್ದಾಳೆ. ಆದರೆ ಆಕೆಯ ತಲೆ ಮೇಲೆ ಗಾಯವಾಗಿದೆ. ನನ್ನ ಮಗಳಿಗೆ ಹೀಗೆ ಆಗುವಾಗ ಆಕೆಯ ಸೊಸೆ ರೇಷ್ಮಾ ಮತ್ತು ಅವಳ 2 ವರ್ಷದ ಮಗ ಅಲ್ಲಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ನಂತರ ಪೊಲೀಸರು ರೇಷ್ಮಾಳನ್ನು ವಿಚಾರಣೆಗೆ ಒಳಪಡಿಸಿದಾಗ ನವೀನಾ ಮೊದಲು ಅಡುಗೆ ಮನೆಯಲ್ಲಿ ನೆಲದ ಮೇಲೆ ಬಿದ್ದರು. ನಂತರ ತನ್ನನ್ನು ಎತ್ತುವಂತೆ ನನ್ನ ಬಳಿ ಕೇಳಿದಳು. ಆದರೆ ಸ್ವಲ್ಪ ತಡವಾಗುತ್ತಿದ್ದಂತೆ ನನ್ನನ್ನು ನಿಂದಿಸಲು ಪ್ರಯತ್ನ ಪಟ್ಟಳು.
ಆಗ ನನಗೆ ಕೋಪ ಬಂದು ಅಲ್ಲಿಯೇ ಇದ್ದ ಸ್ಕ್ರ್ಯೂಡ್ರೈವರ್‌ನಿಂದ ಹಲವು ಬಾರಿ ಇರಿದು, ಹೊಡೆದು ಕೊಂದೆ ಎಂದು ತಪ್ಪೊಪ್ಪಿಕೊಂಡಿದ್ದಾಲೆ.
ಸದ್ಯ ರೇಷ್ಮಾಳನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ..