ಜೋಹಾನ್ಸ್ ಬರ್ಗ್ ನಲ್ಲಿ ಮೊದಲ ದಿನ ಟೀಮ್ ಇಂಡಿಯಾಗೆ ನಿರಾಸೆ Saaksha tv
ನಲ್ಲಿ ವಾಂಡರ್ಸ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾಕ್ಕೆ ಆರಂಭದಲ್ಲೇ ಹೊಡೆತ ಎದುರಾಗಿತ್ತು. ವಿರಾಟ್ ಕೊಹ್ಲಿ ಫಿಟ್ ನೆಸ್ ಕಾರಣದಿಂದ ಕಣಕ್ಕಿಳಿಯಲು ಸಾಧ್ಯವಾಗದ ಹಿನ್ನೆಲೆ ತಂಡಕ್ಕೆ ಭಾರೀ ನಷ್ಟ ಉಂಟಾಯಿತು. ಕೆ.ಎಲ್. ರಾಹುಲ್ ನಾಯಕತ್ವ ವಹಿಸಿಕೊಂಡಿದ್ದರು. ಟಾಸ್ ಗೆದ್ದು ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮಯಾಂಕ್ ಮತ್ತು ರಾಹುಲ್ ಜೋಡಿ ಮೊದಲ ವಿಕೆಟ್ ಗೆ 36 ರನ್ ಕಲೆಹಾಕಿತು. ಈ ವೇಳೆ ದಾಳಿಗಿಳಿದ ಜನ್ಸೆನ್, 26 ರನ್ಗಳಿಸಿದ ಅಗರ್ವಾಲ್ ವಿಕೆಟ್ ಪಡೆದರು. ಒಲಿವಿಯರ್ ಪೂಜಾರಾ (3), ಅಜಿಂಕ್ಯಾ ರಹಾನೆ ಸೊನ್ನೆಗೆ ಔಟಾಗಿ ಅವರ ಮೇಲಿಟ್ಟಿದ್ದ ನಿರೀಕ್ಷೆ ಹುಸಿಗೊಳಸಿದರು.. ಇನ್ನೂ ಹನುಮ ವಿಹಾರಿ ಆಟವೂ 20 ರನ್ಗೆ ಅಂತ್ಯ ಕಂಡಿತ್ತು.
ಈ ನಡುವೆ ನಾಯಕ ರಾಹುಲ್ ಅರ್ಧಶತಕದ ಗಡಿ ದಾಟಿದ್ದರು. ಆದರೆ ಜನ್ಸೆನ್ 50 ರನ್ಗಳಿಸಿದ್ದ ರಾಹುಲ್ ವಿಕೆಟ್ ಪಡೆದರು. ಮಧ್ಯಮ ಕ್ರಮಾಂಕದ ಆಟಗಾರರು ನಿರಾಸೆಯ ಆಟವನ್ನು ಆಡಿದರು. ರನ್ ಗಳಿಸಲು ಒದ್ದಾಡಿದ ರಿಷಬ್ ಪಂತ್ (17), ಶಾರ್ದೂಲ್ ಠಾಕೂರ್ (0) ಮತ್ತು ಮೊಹಮ್ಮದ್ ಶಮಿ (9) ರನ್ಗಳಿಸಿ ಔಟಾದರು. ಇದೆಲ್ಲದರ ಮಧ್ಯೆ ಮಿಂಚಿದ ಅಶ್ವಿನ್ 50 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 46 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಟೀಮ್ ಇಂಡಿಯಾ 202 ರನ್ಗಳಿಗೆ ಮೊದಲ ಇನ್ನಿಂಗ್ಸ್ ತೃಪ್ತಿಕೊಂಡಿತು. ಜನ್ಸೆನ್ 4 ವಿಕೆಟ್ ಪಡೆದರೆ, ರಬಾಡಾ ಮತ್ತು ಒಲಿವಿಯರ್ ತಲಾ 3 ವಿಕೆಟ್ ಪಡೆದು ಟೀಂ ಇಂಡಿಯಾ ಆಟಗಾರರನ್ನು ಕಟ್ಟಿ ಹಾಕಿದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ, ಮಾರ್ಕ್ ರಾಂ 35 ರನ್ ಗಳಿಸಿ ಔಟಾದಾರು. 11 ರನ್ಗಳಿಸಿದ ಡೀನ್ ಎಲ್ಗರ್ ಮತ್ತು 14 ರನ್ಗಳಿಸಿರುವ ಕಿಗಾನ್ ಪೀಟರ್ಸನ್ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಇಂದು ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಭಾರತದ ಬೌಲರಗಳನ್ನು ಎದುರಿಸಲಿದ್ದಾರೆ. ಭಾರತದ ಬೌಲರ್ ಗಳು ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುತ್ತಾರಾ..??.. ಕಾದು ನೋಡಬೇಕಿದೆ..








