ಕಾಂಗ್ರೆಸ್ ಪಕ್ಷವೀಗ ಗೂಂಡಾಗಳನ್ನು ತಯಾರು ಮಾಡುವ ಫ್ಯಾಕ್ಟರಿ : ಬಿಜೆಪಿ Congress party
ಬೆಂಗಳೂರು : ಕಾಂಗ್ರೆಸ್ ಪಕ್ಷವೀಗ ಗೂಂಡಾಗಳನ್ನು ತಯಾರು ಮಾಡುವ ಫ್ಯಾಕ್ಟರಿಯಾಗಿದೆ. ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳು ಉಪಸ್ಥಿತರಿದ್ದ ವೇದಿಕೆಯಲ್ಲಿ, ಸಚಿವರು ಮಾತನಾಡುತ್ತಿದ್ದ ವೇಳೆ ಶಿಷ್ಟಾಚಾರ ಉಲ್ಲಂಘಿಸಿ ವೇದಿಕೆಯಲ್ಲೇ ದುರ್ವರ್ತನೆ ತೋರಿದ ಕಾಂಗ್ರೆಸ್ ನಾಯಕರ ನಡೆ ಖಂಡನೀಯ. ಬಿಜೆಪಿ ಸರ್ಕಾರದ ಅಭಿವೃದ್ಧಿಪರ ರಾಜಕಾರಣದ ಮುಂದೆ ಕನಕಪುರದ ರೌಡಿ ಸಹೋದರರ ಧಮ್ಕಿ ರಾಜಕಾರಣ ನಡೆಯುವುದಿಲ್ಲ. ಗೂಂಡಾ ವರ್ತನೆ ತೋರಿ ಪ್ರಜಾಪ್ರಭುತ್ವದಲ್ಲಿ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ.
ರಾಮನಗರ ಜಿಲ್ಲೆ ತಮ್ಮ ಪ್ರತ್ಯೇಕ #ರಿಪಬ್ಲಿಕ್ ಎಂದು ಡಿಕೆ ಗೂಂಡಾ ಸೋದರರು ಭಾವಿಸಿಕೊಂಡಿದ್ದಾರೆ.
ಬೆದರಿಸಿ, ಹಂಗಿಸಿ, ಕತ್ತಿ ತೋರಿಸಿ ಜಿಲ್ಲಾಡಳಿತ ನಿಯಂತ್ರಿಸುತ್ತಿದ್ದ ಕೊತ್ವಾಲನ ಶಿಷ್ಯರಿಗೆ ಬಿಜೆಪಿ ಸಚಿವರು ಬಿಸಿ ತುಪ್ಪವಾಗಿ ಪರಿಣಮಿಸಿದ್ದರು.
ಹೀಗಾಗಿ ಸಿಎಂ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ #ಕಾಂಗ್ರೆಸ್‌ಗೂಂಡಾಗಿರಿ ಸೃಷ್ಟಿಸಿದರು.
— BJP Karnataka (@BJP4Karnataka) January 4, 2022
ಕಾಂಗ್ರೆಸ್ ಪಕ್ಷವೀಗ ಗೂಂಡಾಗಳನ್ನು ತಯಾರು ಮಾಡುವ ಫ್ಯಾಕ್ಟರಿಯಾಗಿದೆ. ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಕೆಂಪೇಗೌಡರು ಆಳಿದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತೋರಿದ ಗೂಂಡಾ ವರ್ತನೆ ಖಂಡನೀಯ. ರಾಜ್ಯದ ಮರ್ಯಾದೆಯನ್ನು ಮಣ್ಣುಪಾಲು ಮಾಡುವ ನಾಯಕರನ್ನು ಕಾಂಗ್ರೆಸ್ ಬೆಳೆಸುತ್ತಿದೆ. ಇಂತಹ ಅನೈತಿಕ ರಾಜಕಾರಣದ ಮೂಲಕ ಕಾಂಗ್ರೆಸ್ ರಾಜ್ಯದ ಜನತೆಗೆ ಯಾವ ಸಂದೇಶ ನೀಡುತ್ತಿದ್ದಾರೆ?
ಕಾಂಗ್ರೆಸ್ ಸಂಸದ #DKSuresh ಕೇವಲ ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಗೂಂಡಾಗಿರಿ ಪ್ರದರ್ಶಿಸಿದ ಕಾಂಗ್ರೆಸ್ ಪಕ್ಷದ ನಾಯಕರನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ.
ಕಾಂಗ್ರೆಸ್ ಸಂಸದ #DKSuresh ಕೇವಲ ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಗೂಂಡಾಗಿರಿ ಪ್ರದರ್ಶಿಸಿದ @INCKarnataka ಪಕ್ಷದ ನಾಯಕರನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ.#ಕಾಂಗ್ರೆಸ್‌ಗೂಂಡಾಗಿರಿ
— BJP Karnataka (@BJP4Karnataka) January 4, 2022
ಸರ್ಕಾರಿ ಕಾರ್ಯಕ್ರಮದಲ್ಲಿ ಡಿಕೆ ಡಿಕೆ ಎಂದು ಘೋಷಣೆ ಮಾಡಿದ್ದು, ಕಪ್ಪು ಭಾವುಟ ಪ್ರದರ್ಶನ ಮಾಡಿದ್ದು ಎಲ್ಲವೂ ಪೂರ್ವ ನಿಯೋಜಿತ. ಗಲಾಟೆ ಮಾಡಬೇಕು ಎಂಬ ಷಡ್ಯಂತ್ರ ರೂಪಿಸಿಯೇ ನಿನ್ನೆ ವೇದಿಕೆ ಸೃಷ್ಟಿ ಮಾಡಿದ್ದರು. ಗೂಂಡಾ ಸಹೋದರರಿಗೆ ಇಂತಹ ಪ್ರಹಸನ ಸೃಷ್ಟಿ ಹೊಸತಲ್ಲ.
ರಾಮನಗರ ಜಿಲ್ಲೆ ತಮ್ಮ ಪ್ರತ್ಯೇಕ #ರಿಪಬ್ಲಿಕ್ ಎಂದು ಡಿಕೆ ಗೂಂಡಾ ಸೋದರರು ಭಾವಿಸಿಕೊಂಡಿದ್ದಾರೆ. ಬೆದರಿಸಿ, ಹಂಗಿಸಿ, ಕತ್ತಿ ತೋರಿಸಿ ಜಿಲ್ಲಾಡಳಿತ ನಿಯಂತ್ರಿಸುತ್ತಿದ್ದ ಕೊತ್ವಾಲನ ಶಿಷ್ಯರಿಗೆ ಬಿಜೆಪಿ ಸಚಿವರು ಬಿಸಿ ತುಪ್ಪವಾಗಿ ಪರಿಣಮಿಸಿದ್ದರು. ಹೀಗಾಗಿ ಸಿಎಂ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ #ಕಾಂಗ್ರೆಸ್‌ಗೂಂಡಾಗಿರಿ ಸೃಷ್ಟಿಸಿದರು.
ರಾಮನಗರದ ಬ್ಲಡ್ ಬೇರೆ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಅವರು ಏನು ಸಾಧಿಸಲು ಹೊರಟಿದ್ದಾರೆ? ಕೊತ್ವಾಲನ ಶಿಷ್ಯರಿಗೊಂದು ಕಿವಿಮಾತು, ನಿಮ್ಮ ರಕ್ತಸಿಕ್ತ ರಾಜಕೀಯ ಚರಿತ್ರೆಯನ್ನು ಜನತೆಯ ತಲೆಗೆ ಕಟ್ಟಬೇಡಿ. ಕನಕಪುರ ರಿಪಬ್ಲಿಕ್ ರಾಮನಗರವನ್ನು ವ್ಯಾಪಿಸಲು ಸಾಧ್ಯವಿಲ್ಲ ಎಂದು ಹೇಳಿದೆ.








