ವೀಕೆಂಡ್ ಕರ್ಫ್ಯೂ | ಬೆಂಗಳೂರಲ್ಲಿ ರಸ್ತೆಗಿಳಿಯಲ್ಲ ಬಿಎಂಟಿಸಿ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ಮತ್ತೆ ಶುರುವಾಗಿದ್ದು, ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಕೊರೊನಾ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. Bangalore weekend-curfew-bmtc-bus-ksrtc saaksha tv
ಹೀಗಾಗಿಯೇ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಹಾಫ್ ಲಾಕ್ ಡೌನ್ ಮತ್ತು ವೀಕೆಂಡ್ ಲಾಕ್ ಡೌನ್ ಜಾರಿ ಮಾಡಿದೆ.
ವೀಕೆಂಡ್ ಕರ್ಫ್ಯೂ ವೇಳೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ, ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ತುರ್ತು ಅಗತ್ಯ ಸೇವೆಗೆ ಒಳಪಡಲಿವೆ.
ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಲಿದ್ದು, ಮೆಟ್ರೋ ಓಡಾಟ ಎಂದಿನಂತೆ ಇರಲಿದೆ.
ವೀಕೆಂಡ್ ಕರ್ಫ್ಯೂ ವೇಳೆ ಶನಿವಾರ ಮತ್ತು ಭಾನುವಾರ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ರಸ್ತೆಗಳಿಯಲ್ಲ.
ಜೊತೆಗೆ ರಾತ್ರಿ ನಿಷೇಧಾಜ್ಞೆ ವೇಳೆಯೂ ಬಸ್ ಓಡಾಡುವುದಿಲ್ಲ. ಅಗತ್ಯ ಸೇವೆಯಡಿ ಮಾತ್ರ ಬಸ್ ಓಡಾಟ ನಡೆಸಲಿದೆ.
ಆದ್ರೆ ಸಾರ್ವಜನಿಕ ಸಂಚಾರ ಸೇವೆ ಇರುವುದಿಲ್ಲ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.









