ಬಿಜೆಪಿ ಲಾಕ್ ಡೌನ್ ಎಂದ ಡಿಕೆಶಿಗೆ ‘ ಹಳೆ ಹೇಳಿಕೆ’ ನೆನಪಿಸಿದ ಕೇಸರಿ ಪಡೆ karnataka lockdown news today
ಬೆಂಗಳೂರು : ಕೊರೊನಾ ತಡೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹಾಫ್ ಲಾಕ್ ಡೌನ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ. ಇದು ಕೋವಿಡ್ ಕರ್ಫ್ಯೂ ಅಲ್ಲ, ಬಿಜೆಪಿ ಕರ್ಫ್ಯೂ. ಯಾವ ಟಫ್ ರೂಲ್ಸ್ ಅಲ್ಲಾ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ಬಿಜೆಪಿ ಸರ್ಕಾರಕ್ಕೆ ಲಾಕ್ಡೌನ್ ಅಗತ್ಯವಿಲ್ಲ. ಜನಸಾಮಾನ್ಯರ ಆರೋಗ್ಯ ರಕ್ಷಣೆಯೇ ನಮ್ಮ ಸರ್ಕಾರದ ಆದ್ಯತೆ. ಮೊದಲನೇ ಅಲೆಯ ಸಂದರ್ಭದಲ್ಲಿ ಲಾಕ್ಡೌನ್ ಮಾಡಲು ಆಗ್ರಹಿಸಿ ನೀವು ಆಡಿದ ಮಾತುಗಳನ್ನು ಒಮ್ಮೆ ನೆನಪಿಸಿಕೊಳ್ಳಿ.
ನೀರಿಗಾಗಿ ನಡಿಗೆ..!? ಭಾರೀ ಸೋಜಿಗದ ಸಂಗತಿ.
ಡಿಕೆಶಿ ಅವರೇ, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಈ ಹಿಂದೆ ನೀವು ಮಾಡಿದ್ದು ನೀರಿನ ನಡಿಗೆಯಲ್ಲವೇ?
ಫಲಿತಾಂಶವೇನು?
— BJP Karnataka (@BJP4Karnataka) January 5, 2022
ನೀರಿಗಾಗಿ ನಡಿಗೆ..!? ಭಾರೀ ಸೋಜಿಗದ ಸಂಗತಿ. ಡಿಕೆಶಿ ಅವರೇ, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಈ ಹಿಂದೆ ನೀವು ಮಾಡಿದ್ದು ನೀರಿನ ನಡಿಗೆಯಲ್ಲವೇ? ಫಲಿತಾಂಶವೇನು ಎಂದು ಕುಟುಕಿದೆ.