ದೇಶದಲ್ಲಿ ಇಂದು ಕೋವಿಡ್ ಮಹಾಸ್ಪೋಟ : 90,928 ಕೇಸ್ ಗಳು ಪತ್ತೆ
ನವದೆಹಲಿ : ಇಂದು ದೇಶದಲ್ಲಿ ಕೊರೊನಾ ಮಹಾಮಾರಿ ಸ್ಪೋಟವಾಗಿದೆ.. ನಿನ್ನೆ ದೇಶದಲ್ಲಿ 58 ಸಾವಿರ ದೈನಂದಿನ ಕೇಸ್ ಗಳು ದಾಖಲಾಗಿದ್ದವು.. ಆದ್ರೆ ಇಂದು 90 ,928 ಕೋವಿಡ್ ಕೇಸ್ ಗಳು ದೇಶದಲ್ಲಿ ಪತ್ತೆಯಾಗಿದ್ದು , ದೇಶದ ಜನರ ಆತಂಕ ದ್ವಿಗುಣಗೊಳಿಸಿದೆ..ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ. ಇಂದು 90,928 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಇದರೊಂದಿಗೆ ಭಾರತದ ಪಾಸಿಟಿವಿಟಿ ದರ ಶೇ 6.43ಕ್ಕೆ ತಲುಪಿದೆ..ಇನ್ನು ಇದೇ ಅವಧಿಯಲ್ಲೇ 325 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.. ಈ ಮೂಲಕ ಈವರೆಗಿನ ಒಟ್ಟು ಸಾವಿನ ಒಟ್ಟು ಸಂಖ್ಯೆ 4,82,876ಕ್ಕೆ ತಲುಪಿದೆ. ಸದ್ಯ ದೇಶದಲ್ಲಿ 2,85,401 ಸಕ್ರಿಯ ಪ್ರಕರಣಗಳಿದ್ದು, ಈ ವರೆಗೆ 3,43,41,009 ಮಂದಿ ಗುಣಮುಖರಾಗಿದ್ದಾರೆ.ಮತ್ತೊಂದೆಡೆ ಕೋವಿಡ್ 3ನೇ ಅಲೆ ಆತಂಕದ ನಡುವೆ ದೇಶದಲ್ಲಿ ಒಮಿಕ್ರಾನ್ ಆತಂಕವೂ ಹೆಚ್ಚಾಗಿದ್ದು , ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 2630ಕ್ಕೆ ಏರಿಕೆಯಾಗಿದೆ.