ಮದ್ಯಪ್ರಿಯರಿಗೆ ಶಾಕ್ – ವೀಕೆಂಡ್ ನಲ್ಲಿ ಎಣ್ಣೆ ಮಾರಾಟಕ್ಕಿಲ್ಲ….
ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ. ವೀಕೆಂಡ್ ಕರ್ಫ್ಯೂ ಮತ್ತು ನಿಷೇಧಾಜ್ಞೆ ಸಮಯದಲ್ಲಿ ಮದ್ಯ ಮಾರಟಕ್ಕೆ ಅವಕಾಶ ನೀಡದಿರಲು ಅಬಕಾರಿ ಇಲಾಖೆ ನಿರ್ಧರಿಸಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯಯವಾಗಿದೆ.
ಕೋವಿಡ್ 19 ಮತ್ತು ಒಮಿಕ್ರಾನ್ ಸೋಂಕುಗಳ ಹೆಚ್ಚಳ ಹಿನ್ನಲೆಯಲ್ಲಿ ಸರ್ಕಾರ ರಾಜ್ಯದ್ಯಾಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಆದೇಶಿಸಿದೆ. ತುರ್ತು ಸೇವೆಗಳನ್ನ ಹೊರತುಪಡಿಸಿ ಇನ್ನೂಳಿದ ಎಲ್ಲಾ ಸೇವೆಗಳು ಬಂದ್ ಆಗಲಿವೆ.
ಮದ್ಯಪ್ರಿಯರು ಬಾರ್ ಓಪನ್ ಗಾಗಿ ಸೋಮವಾರದವರೆಗೂ ಕಾಯಬೇಕಾಗುತ್ತದೆ.