ವೀಕೆಂಡ್ ಕರ್ಫ್ಯೂ ತುಂಬಾ ವೀಕ್, ಕರ್ಫ್ಯೂಗೆ ಕ್ಯಾರೆ ಎನ್ನದ ಜನರ
ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಇಲ್ಲ, ಬೇಕಾಬಿಟ್ಟಿ ಓಡಾಟ
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಬರಿ ಹೆಸರಿಗೆ ಸೀಮಿತವಾಯ್ತಾ..?
ಬೆಂಗಳೂರು : ವೀಕೆಂಡ್ ಕರ್ಫ್ಯೂ ತುಂಬಾ ವೀಕ್, ಕರ್ಫ್ಯೂಗೆ ಕ್ಯಾರೆ ಎನ್ನದ ಜನರ.. ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಇಲ್ಲ, ಬೇಕಾಬಿಟ್ಟಿ ಓಡಾಟ.. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಬರಿ ಹೆಸರಿಗೆ ಸೀಮಿತವಾಯ್ತಾ..?
ಹೌದು..! ಹುಚ್ಚು ಕುದುರೆಯಂತೆ ಸಿಕ್ಕ ಸಿಕ್ಕವರ ದೇಹ ಹೊಕ್ಕುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೂ ರಾಜ್ಯದಲ್ಲಿ ಕರ್ಫ್ಯೂ ಇರಲಿದೆ.
ಈ ವೇಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.
ಈ ನಿಯಮವನ್ನು ಉಲ್ಲಂಘಿಸಿ ಯಾರಾದ್ರೂ ಬೇಕಾಬಿಟ್ಟಿ ಓಡಾಡಿದ್ರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಆದ್ರೆ ರಾಜ್ಯದ ಹಲವು ಜಿಲ್ಲೆಗಳಿಗೆ ಈ ವೀಕೆಂಡ್ ಕರ್ಫ್ಯೂಗೆ ಜನರು ಕ್ಯಾರೆ ಎನ್ನುತ್ತಿಲ್ಲ. ಮಂಡ್ಯ, ಮೈಸೂರು, ಮದ್ದೂರು, ಚಿಕ್ಕಬಳ್ಳಾಪುರದಲ್ಲಿ ಜನ ಜೀವನ ಎಂದಿನಂತೆ ಇದೆ.
ಮುಖ್ಯವಾಗಿ ಕೊರೊನಾ ಹಾಟ್ ಸ್ಪಾಟ್ ಆಗಿರುವಂತೆ ಕಾಣುತ್ತಿರುವ ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಹೆಸರಿಗೆ ಮಾತ್ರ ಇದೆ. ಜನರು ಮುಂಜಾನೆಯಿಂದಲೇ ಬೈಕ್, ಕಾರುಗಳ ಮೂಲಕ ಓಡಾಡುತ್ತಿದ್ದಾರೆ.









