ವೀಕೆಂಡ್ ಕರ್ಪ್ಯೂಗೆ ಡೋಂಟ್ ಕೇರ್ ಎಂದ ಜನ Saaksha Tv
ಚಾಮರಾಜನಗರ: ರಾಜ್ಯದಲ್ಲಿ ಸದ್ಯ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದೆ. ಜಿಲ್ಲೆಯ ಕೊಳ್ಳೇಗಾಲ ತಾಲುಕಿನ ಜನ ಡೋಂಟ್ ಕೇರ್ ಅಂದಿದ್ದಾರೆ. ಎಂದಿನಂತೆ ಬೀದಿ ಬೀದಿಗಳಲ್ಲಿ ಜನರ ಓಡಾತ್ತಿದ್ದು, ವ್ಯಾಪಾರವು ಜೋರಾಗಿಯೇ ನಡೆಯುತ್ತಿದೆ. ಜನರು ಅಗತ್ಯ ವಸ್ತುಗಳ ಖರಿದಿಗೆ ಮುಗಿಬಿದ್ದಿದ್ದಾರೆ
ಹಾಗೆಯೇ ಪಟ್ಟಣದಲ್ಲಿ ಅಂಗಡಿ, ಮುಂಗಟ್ಟುಗಳು ತೆರೆದಿದ್ದು ಖಾಸಗಿ ಬಸ್ ಗಳು ಸಂಚರಿಸುತ್ತಿವೆ. ಅಂಬೇಡ್ಕರ್ ರಸ್ತೆ ಸೇರಿದಂತೆ ಹಲವೆಡೆ ಜನರ ಸಂಚಾರ ಜೋರಾಗಿ ನಡೆದಿದೆ. ಕೊರೊನಾ ತಪಾಸಣೆಯು ಪಟ್ಟಣದ ಹೊರವಲಯ ಕಷ್ಟೆ ಸೀಮಿತವಾಗಿದ್ದು, ಕಾಟಾಚಾರಕ್ಕೆ ವೀಕೆಂಡ್ ಕರ್ಪ್ಯೂ ಮಾಡಿದ್ದಾರೆ ಇದು ಕೊರೊನಾ ಎಚ್ಚಳಕ್ಕೆ ಕಾರಣವಾಗಬಹುದು. ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.