ಮರು ಮದುವೆಯಾಗಲು ಬಯಸಿದ ತಂದೆಯನ್ನ ಕೊಂದ ಮಗ
ಮತ್ತೊಂದು ಮದುವೆಯಾಗೋದಾಗಿ ಹೇಳಿಕೊಂಡ ತಂದೆಯನ್ನ ಮಗನೇ ಕೊಂದುಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.. ಅಪ್ಪನ ಬಯಕೆ ಕೇಳಿ ಸಿಟ್ಟಾಗಿದ್ದ ಮಗ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.. ಮಹಾರಾಷ್ಟ್ರದ ಪುಣೆಯಲ್ಲಿ ಇಂತಹದೊಂದು ಘಟನೆ ನಡೆದಿದೆ.. 80 ವರ್ಷದ ಶಂಕರ್ ರಾಂಭೌ ಬೋರ್ಹಾಡೆ ಮೃತ ದುರ್ದೈವಿಯಾಗಿದ್ದಾರೆ. ಶೇಖರ್ ಬೋರ್ಹಾಡೆ (50) ಕೊಲೆಗೈದ ಆರೋಪಿ..
ಇವರು ವೈಶಂಪಾಯನಲಿ ಪ್ರದೇಶದ ಹೌಸಿಂಗ್ ಸೊಸೈಟಿಯ ನಿವಾಸಿಯಾಗಿದ್ದರು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ರಾಜಗುರುನಗರದಲ್ಲಿ ಘಟನೆ ನಡೆದಿದೆ. ಶಂಕರ್ ಬೋರ್ಹಾಡೆ ಮ್ಯಾಟ್ರಿಮೋನಿಯಲ್ಲಿ ಮರು ಮದುವೆ ಮಾಡಿಕೊಳ್ಳುವ ಸಲುವಾಗಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದರು. ಈ ವಿಷಯ ತಿಳಿದ ಶೇಖರ್ ಕೋಪಗೊಂಡು ಚಾಕುವಿನಿಂದ ತನ್ನ ತಂದೆಯ ಕತ್ತನ್ನು ಕೊಯ್ದಿದ್ದಾನೆ. ನಂತರ ರುಬ್ಬುವ ಕಲ್ಲಿನಿಂದ ಹೊಡೆದಿದ್ದಾರೆ.
ಬಳಿಕ ಶೇಖರ್ ರಾಜಗುರು ಪೊಲೀಸ್ ಠಾಣೆಗೆ ತೆರಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ತನ್ನ ತಂದೆ ಮರು ಮದುವೆಯಾಗಲು ಬಯಸಿದ್ದರು. ಇದರಿಂದಾಗಿ ಕೋಪಗೊಂಡು ಅವರನ್ನು ಹತ್ಯೆಗೈದಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖರ್ನದನ್ನು ಬಂಧಿಸಲಾಗಿದೆ.