ಜನರಿಗೆ ಭಯವನ್ನುಂಟು ಮಾಡಿದ ಗಂಡು ಚಿರತೆ ಸೆರೆ Saaksha Tv
ಚಾಮರಾಜನಗರ: ಗ್ರಾಮದಲ್ಲಿ ಆಗಿಂದಾಗ್ಗೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಹಾಗೂ ರೈತರಿಗೆ ಭಯವುಂಟು ಮಾಡುತ್ತಿದ್ದ ಗಂಡು ಚಿರತೆ. ಇದು ಸುಮಾರು ಎರಡು ವರ್ಷದ ಗಂಡು ಚಿರತೆಯಾಗಿದ್ದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ವೀರನಪುರ ಗ್ರಾಮದಲ್ಲಿ ನಡೆದಿದೆ.
ಆಗಿಂದಾಗ್ಗೆ ಗ್ರಾಮದ ಸುತ್ತಲಿನ ಜಮೀನುಗಳಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಹಾಗೂ ರೈತರಿಗೆ ಭಯವನ್ನುಂಟು ಮಾಡಿತ್ತು. ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯ ಸೆರೆಗಾಗಿ ಗ್ರಾಮದಲ್ಲಿ ಬೋನಿರಿಸಿದ್ದರು. ಎಂದಿನಂತೆ ಗ್ರಾಮದೊಳಗೆ ಆಗಮಿಸಿದ ಚಿರತೆ ಇಂದು ಬೆಳಗ್ಗೆ ಬೋನಿಗೆ ಬಿದ್ದು ಸೆರೆಯಾಗಿದೆ. ಸೆರೆಯಾದ ಚಿರತೆಯನ್ನು ಬಿ.ಆರ್ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಬಿಡಲಾಗಿದೆ.








