ನಾವು ಹೆದರುವ ಮಕ್ಕಳಲ್ಲ.. ಹೋರಾಟ ನಮ್ಮ ರಕ್ತಗತ : ಡಿ.ಕೆ.ಶಿವಕುಮಾರ್
ರಾಮನಗರ : ನಾವೇನು ಹೆದರುವ ಮಕ್ಕಳಲ್ಲ, ಹೋರಾಟ ಎಂಬುದು ನಮ್ಮಲ್ಲಿ ರಕ್ತಗತವಾಗಿ ಬಂದಿದೆ.
ನಿಮಗೆ ತಾಕತ್ ಇದ್ದರೇ ನಮ್ಮನ್ನ ಬಂಧಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಡಳಿತ ಪಕ್ಷಕ್ಕೆ ಸವಾಲ್ ಹಾಕಿದ್ದಾರೆ.
ಕನಕಪುರದ ಸಂಗಮದಲ್ಲಿ ಇಂದು ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ಈ ವೇದಿಕೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನೇರವಾಗಿ ಬಿಜೆಪಿ ವಿರುದ್ಧ ಮುಗಿಬಿದ್ದರು.
ಕಾಂಗ್ರೆಸ್ ಎಂದರೆ ಬಲಿದಾನಕ್ಕೆ ಹೆಸರಾದ ಪಕ್ಷ. ಕಾಂಗ್ರೆಸ್ ಇತಿಹಾಸವೇ ನಮ್ಮ ದೇಶದ ಇತಿಹಾಸ.
ನಾವೇನು ಹೆದರುವ ಮಕ್ಕಳಲ್ಲ, ಹೋರಾಟ ಎಂಬುದು ನಮ್ಮಲ್ಲಿ ರಕ್ತಗತವಾಗಿ ಬಂದಿದೆ ಎಂದು ಗುಡುಗಿದರು.
ಇನ್ನು ನಮ್ಮ ಪಾದಯಾತ್ರೆಯನ್ನು ತಡೆಯಲು ಬಿಜೆಪಿ ಸಾಕಷ್ಟು ಪ್ರಯತ್ನ ಮಾಡಿದೆ. ನಿಮಗೆ ತಾಕತ್ ಇದ್ದರೆ ಇಲ್ಲಿರುವ ಶಾಸಕರು, ಮಠಾಧೀಶರನ್ನು ಬಂಧಿಸಿ ನೋಡೋಣ ಎಂದು ಸವಾಲು ಹಾಕಿದರು.
ನಮ್ಮ ನಡೆಗೆ ಪಕ್ಷಕ್ಕಾಗಿ ಅಲ್ಲ, ನೀರಿಗಾಗಿ. ಬಿಜೆಪಿಯು ಅಧಿಕಾರ ದುಪಯೋಗ ಮಾಡಿಕೊಂಡು ಪಾದಯಾತ್ರೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ.
ಹರಿಯುವ ನೀರು, ಉರಿಯುವ ಸೂರ್ಯ, ಬೀಸುವ ಗಾಳಿಯನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲ.
ಅದೇ ರೀತಿ ನಮ್ಮ ಪಾದಯಾತ್ರೆಯನ್ನೂ ತಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.









