ಕೈ ಇದ್ದರೂ ವಿಕಲಚೇತನನಂತೆ ನಟನೆ – ಭಿಕ್ಷುಕನ ಅಸಲಿ ಮುಖ ಬಯಲು
ಬೆಂಗಳೂರು ನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ನಕಲಿ ಭಿಕ್ಷುಕನೊಬ್ಬನ ಬಣ್ಣವನ್ನ ಜನರೆ ಬಟಾ ಬಯಲು ಮಾಡಿದ್ದಾರೆ.
ನಗರದ ಸೌತ್ ಎಂಡ್ ಸರ್ಕಲ್ ಬಳಿ ಎರಡು ಕೈಗಳಿರುವ ವ್ಯಕ್ತಿಯೊಬ್ಬ ಒಂದು ಕೈಯನ್ನ ಬಟ್ಟೆಯ ಒಳಗಡೆ ಅಡಗಿಸಿಟ್ಟುಕೊಂಡು ಅಂಗವಿಕಲನಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ. ಒಂದು ಕೈಲ್ಲಿ ಊರುಗೋಲು ಹಿಡಿದುಕೊಂಡು ಅಯ್ಯೋ ಪಾಪಾ ಎಂದು ಕನಿಕರ ಬರಿಸುವಂತೆ ನಟಿಸಿ ಜನರ ಬಳಿ ಹಣ ಪಡೆಯುತ್ತಿದ್ದ.
ಅದೇಗೋ ಇವನ ನಾಟಕ ಜನರಿಗೆ ಗೊತ್ತಾಗಿದೆ ನಡು ರೋಡಿನಲ್ಲಿ ಅಂಗಿ ಬಿಚ್ಚಿಸಿ ನಕಲಿ ಭಿಕ್ಷುಕನ ವೇಷವನ್ನ ಕಳಚಿ ಜನರು ಛೀಮಾರಿ ಹಾಕಿದ್ದಾರೆ. ಈತನ ಅಸಲಿ ಮುಖ ಬಯಲು ಮಾಡುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಕರೋನಾ ಸಮಯದಲ್ಲಿ ಎಷ್ಟು ಕಷ್ಟ ಪಟ್ಟು ದುಡಿಯುತ್ತೇವೆ ನಿಮಗೂ ಅದರಲ್ಲಿ ಹತ್ತು ರುಪಾಯಿ ಹಾಕುತ್ತೇವೆ. ನಿಮ್ಮಿಂದ ನಿಜವಾದ ವಿಕಲಚೇತನರಿಗೂ ಅವಮಾನ ಮಾಡಿದಂತಾಗುತ್ತದೆ ಎಂದು ಜನ ಕಿಡಿಕಾರಿದ್ದಾರೆ…
https://sharechat.com/post/D8zBlGW?referrer=copyLink








