ನಾನು ರೆಡಿ… ವಿರಾಟ್ ಕೊಹ್ಲಿ ಸ್ಪಷ್ಟನೆ
ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲಲು ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಇದೆ.
ಕೇಪ್ ಟೌನ್ ನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೇ ಆಫ್ರಿಕಾ ನೆಲದಲ್ಲಿ ಕೊಹ್ಲಿ ಸೇನೆ ಇತಿಹಾಸ ಬರೆಯಲಿದೆ.
ಈ ಮಧ್ಯೆ ಬೆನ್ನು ನೋವಿನ ಕಾರಣದಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ದೂರ ಇದ್ದ ವಿರಾಟ್ ಕೊಹ್ಲಿ ಲಭ್ಯತೆ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಇದೀಗ ಈ ಕುರಿತು ಸ್ವತಃ ವಿರಾಟ್ ಕೊಹ್ಲಿಯೇ, ನಾನು ರೆಡಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ. ಕೇಟ್ ಟೌನ್ ನಲ್ಲಿ ನಡೆಯುವ ಮೂರನೇ ಟೆಸ್ಟ್ ಪಂದ್ಯಕ್ಕೆ ನಾನು ಸಿದ್ಧ ಎಂದಿದ್ದಾರೆ.
ಇನ್ನು ವೇಗಿ ಮೊಹಮ್ಮದ್ ಸಿರಾಜ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಕೊಹ್ಲಿ ಬಹಿರಂಗಪಡಿಸಿದ್ದಾರೆ.
”ನಾನು ಸಂಪೂರ್ಣ ಫಿಟ್‌ನೆಸ್‌ನಲ್ಲಿದ್ದೇನೆ. ಆದರೆ, ಸಿರಾಜ್ ಪಂದ್ಯ ಆಡಲು ಸಿದ್ಧರಿಲ್ಲ ಎಂದಿದ್ದಾರೆ. ಇನ್ನು ಸಿರಾಜ್ ಬದಲಿಗೆ ಯಾರು ಕಣಕ್ಕಿಳಿಯಲಿದ್ದಾರೆ ಅನ್ನೋ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ವಿಚಾರದಲ್ಲಿ ನಮಗೆ ಸಾಕಷ್ಟು ಆಯ್ಕೆಗಳಿವೆ ಎಂದಿದ್ದಾರೆ.









