ಭಾರತ vs ದಕ್ಷಿಣ ಆಫ್ರಿಕಾ 3ನೇ ಟೆಸ್ಟ್ – ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
ಭಾರತ, ದಕ್ಷಿಣ ಆಫ್ರಿಕಾ ಸರಣಿಯ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯ ಇದಿನಿಂದ ಶುರುವಾಗಲಿದೆ. ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮೊಹಮ್ಮದ್ ಸಿರಾಜ್ ಬದಲಿಗೆ ಉಮೇಶ್ ಯಾದವ್ ಗೆ ಅವಕಾಶ ನಿಡಲಾಗಿದೆ. ಉಳಿದಂತೆ, ಬೆನ್ನಿನ ಸೆಳೆತದಿಂದಾಗಿ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸೇರ್ಪಡೆಯಾಗಿದ್ದು. ವಿರಾಟ್ ಕೊಹ್ಲಿಗಾಗಿ ಹನುಮ ವಿಹಾರಿ ಸ್ಥಾನ ತ್ಯಜಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಯಾವುದೇ ಬದಲಾವಣೆ ಮಾಡದೆ ಹಳೆಯ ಗೆಲುವಿನ ತಂಡವನ್ನೆ ಮುಂದುವರೆಸಲಿದೆ.
ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಬೌಲರ್‌ಗಳ ಪ್ರಾಬಲ್ಯ ಹೆಚ್ಚಾಗಿತ್ತು. ಕೇಪ್ ಟೌನ್ ನಲ್ಲಿ ಹೆಚ್ಚು ರನ್ ಗಳಿಸುವುದನ್ನು ನಾವು ನೋಡಬಹುದು. ದಕ್ಷಿಣ ಆಫ್ರಿಕಾದ ಇತರ ಸ್ಟೇಡಿಯಂಗಳ ಪಿಚ್‌ಗಳಿಗಿಂತ ಇಲ್ಲಿನ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಸೂಕ್ತವಾಗಿದೆ.
ಎರಡೂ ತಂಡಗಳು-
ಆಫ್ರಿಕಾ: ಡೀನ್ ಎಲ್ಗರ್ (ಸಿ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರೈಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬೌಮಾ, ಕೈಲ್ ವೆರೆನಾ (ವಿಕೆ), ಮಾರ್ಕೊ ಜೆನ್ಸನ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಡುವಾನ್ ಒಲಿವಿಯರ್, ಲುಂಗಿ ಎನ್ಗಿಡಿ.
ಭಾರತ : ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ (ಸಿ), ರಿಷಬ್ ಪಂತ್ (ವಿಕೆ), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್.