ಭುವನೇಶ್ವರ್: ಒಡಿಶಾ ರಾಜ್ಯಸರ್ಕಾರ ಬಜೆಟ್‌ನ್ನು ಭಾಗಶಃ ಕಾಗದ ರಹಿತಗೊಳಿಸುವ ಮೂಲಕ 700 ದೊಡ್ಡ ಮರಗಳನ್ನು ಉಳಿಸಿದೆ ಎಂದು ರಾಜ್ಯಪಾಲ ಗಣೇಶಿ ಲಾಲ್ ತಿಳಿಸಿದ್ದಾರೆ. ಬಜೆಟ್ ಅಧಿವೇಶನ ಶುರುವಾಗುವುದಕ್ಕೂ ಮುನ್ನ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳೆದ ಬಾರಿ ಬಜೆಟ್ ನಲ್ಲಿ ಡಿಜಿಟಲ್ ವಿಧಾನಗಳನ್ನು ಬಳಸಿಕೊಂಡಿದ್ದರಿಂದ ಸುಮಾರು 57 ಲಕ್ಷ ಪುಟಗಳ ಮುದ್ರಣ ಮಾಡುವುದು ಕಡಿಮೆಯಾಗಿತ್ತು. ಇದರಿಂದಾಗಿ 700 ದೊಡ್ಡ ದೊಡ್ಡ ಮರಗಳು ಉಳಿದಿವೆ ಎಂದು ಹೇಳಿದರು. ಭವಿಷ್ಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಾಗದ ರಹಿತ ಬಜೆಟ್ ತಯಾರಿ ಮಾಡುವ, ಪೂರ್ಣವಾಗಿ ಡಿಜಿಟಲ್‌ಗೆ ಪರಿವರ್ತನೆಯಾಗುವ ಉದ್ದೇಶ ಹೊಂದಿದೆ. ಇದರಿಂದ ತುಂಬ ಅನುಕೂಲವಾಗಲಿದೆ. ಅಷ್ಟೇ ಅಲ್ಲ ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ಒಂದೇ ಪುಟದ ಸ್ಯಾಲರಿ ಬಿಲ್ ಹಾಗೂ ಪಿಂಚಣಿ ಪೇಪರ್ ಗಳನ್ನು ಪರಿಚಯಿಸಲಾಗಿದೆ. ಇವುಗಳನ್ನು ಸಂಯೋಜಿತ ಹಣಕಾಸು ನಿರ್ವಹಣಾ ವ್ಯವಸ್ಥೆಯ ಮೂಲಕ ವಿದ್ಯುನ್ಮಾನವಾಗಿ ಪರಿಷ್ಕರಿಸಲಾಗುತ್ತಿದೆ ಎಂದು ಗಣೇಶಿ ಲಾಲ್ ತಿಳಿಸಿದ್ದಾರೆ.
ರಾಮನಗರಿಯಲ್ಲೇ ಫೈಸಲಾ ಆಗಲಿ ಧಮ್ ಇದ್ದರೆ ಚುನಾವಣೆಗೆ ನಿಲ್ಲಿ ಎಂದು ಅಖಿಲೇಶ್ ಗೆ ಯೋಗಿ ಆದಿತ್ಯನಾಥ್ ಓಪನ್ ಚಾಲೆಂಜ್
ಉತ್ತರ ಪ್ರದೇಶದ ರಾಜಕೀಯ ರಣಕಣದಲ್ಲಿ ಈಗ ಅಯೋಧ್ಯೆಯ ಕಿಚ್ಚು ಹತ್ತಿಕೊಂಡಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಟೀಕೆಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅತ್ಯಂತ...








