ಯಾತ್ರೆಯ ಮೂಲಕ ಕೋವಿಡ್ ವ್ಯಾಪಿಸಿದ್ದೇ ಕಾಂಗ್ರೆಸ್ ಸಾಧನೆ : ಬಿಜೆಪಿ
ಬೆಂಗಳೂರು : ಬೆಂಗಳೂರಿಗೆ ನೀರು ಪೂರೈಸುತ್ತೇವೆ ಎಂದು ಜನರನ್ನು ಭಾವನಾತ್ಮಕವಾಗಿ ಸೆಳೆದ ಕಾಂಗ್ರೆಸ್ ಪಕ್ಷ ಈಗ ಬೆಂಗಳೂರಿಗೆ ಕೋವಿಡ್ ವಿಸ್ತರಿಸುತ್ತಿದೆ.
ಸುಳ್ಳಿನ ಜಾತ್ರೆಯಲ್ಲಿ ಭಾಗಿಯಾಗುತ್ತಿರುವವರೆಲ್ಲಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಯಾತ್ರೆಯ ಮೂಲಕ ಕೋವಿಡ್ ವ್ಯಾಪಿಸಿದ್ದೇ ಕಾಂಗ್ರೆಸ್ ಸಾಧನೆ ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ನಿಯಂತ್ರಣದಲ್ಲಿದ್ದ ಕೋವಿಡ್ ಕಾಂಗ್ರೆಸ್ ನಾಯಕರ ರಾಜಕೀಯ ಪ್ರೇರಿತ ನಡೆಯಿಂದಾಗಿ ಮತ್ತೆ ಉಲ್ಬಣಗೊಳ್ಳುತ್ತಿದೆ.
ಇದಕ್ಕಾಗಿ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು.ಕೋವಿಡ್ ಎಲ್ಲಿದೆ, ಕೋವಿಡ್ ಎಲ್ಲಿದೆ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಉದ್ಧಟತನ ಪ್ರದರ್ಶಿಸಿದ್ದರು.
ಕಾಂಗ್ರೆಸ್ಸಿಗರ ಉದ್ಧಟತನದಿಂದ ಇಂದು ರಾಜ್ಯದಲ್ಲಿ ಸೋಂಕಿನ ಪ್ರಮಾಣ 22 ಸಾವಿರ ತಲುಪಿದೆ. ವೈರಸ್ ಹಬ್ಬಿಸಿ, ರಾಜ್ಯದ ಜನರ ಆತಂಕಕ್ಕೆ ಕಾರಣವಾದ ಕಾಂಗ್ರೆಸ್ ಬೇಷರತ್ ಕ್ಷಮೆ ಯಾಚಿಸಲಿ ಎಂದು ಒತ್ತಾಯಿಸಿದೆ.
https://twitter.com/BJP4Karnataka/status/1481540268079910912?s=20
ಕೋವಿಡ್ ನಿಯಂತ್ರಣಕ್ಕಾಗಿ ಪ್ರಧಾನಿ ಏನು ಮಾಡಿದ್ದಾರೆಂದು ಪ್ರಶ್ನೆ ಮಾಡುತ್ತಿದ್ದ ಕಾಂಗ್ರೆಸ್ ವರಿಷ್ಠರೂ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಬೇಕು.
ನಿಮ್ಮ ರಾಜ್ಯ ಘಟಕದ ಉದ್ಧಟತನ, ಬೇಜವಾಬ್ದಾರಿಯಿಂದ ಇಂದು ಕರ್ನಾಟಕದಲ್ಲಿ ಕೋವಿಡ್ ಸ್ಫೋಟಗೊಂಡಿದೆ.
ಅಂತಿಮವಾಗಿ ಕಾಂಗ್ರೆಸ್ ಪಕ್ಷ ಈ ದೇಶದ ಸಂವಿಧಾನ ಹಾಗೂ ಕಾನೂನನ್ನು ಅಪಮಾನಗೊಳಿಸಿದೆ.
ಹೈಕೋರ್ಟ್ ಛೀಮಾರಿ ಹಾಕಿದ ಮೇಲೂ ಉದ್ದಟತನದಿಂದ ವರ್ತಿಸಿದ್ದ ಸಿದ್ದರಾಮಯ್ಯ, ಡಿಕೆಶಿ ಅವರು ಹೈಕಮಾಂಡ್ ಆಣತಿ ಮೇರೆಗೆ ಪಾದಯಾತ್ರೆ ನಿಲ್ಲಿಸಿದ್ದಾರೆ. ಇವರಿಗೆ ಸಂವಿಧಾನಕ್ಕಿಂತ ನಕಲಿ ಗಾಂಧಿ ಕುಟುಂಬವೇ ಶ್ರೇಷ್ಠ ಎಂದು ಕುಟುಕಿದೆ.








