ಬ್ರಿಟನ್, ಮೇ 17: ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯವು ಗುರುವಾರ ಬಿಡುಗಡೆ ಮಾಡಿದ ಅಧ್ಯಯನದ ಪ್ರಕಾರ, ಬ್ರಿಟನ್‌ನಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 25 ಕ್ಕೂ ಹೆಚ್ಚು ಜನರಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿರಬಹುದು ಎಂದು ತಿಳಿಸಿದೆ.
ಸಾಲ್ಫೋರ್ಡ್ ರಾಯಲ್ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ ಮತ್ತು ರೆಸ್ ಕನ್ಸೋರ್ಟಿಯಂ ಸಹಯೋಗದೊಂದಿಗೆ ಈ ಅಧ್ಯಯನವನ್ನು ನಡೆಸಲಾಯಿತು. ಕೊರೋನಾ ಸೋಂಕು ಏಕಾಏಕಿ ಬ್ರಿಟನ್‌ನಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಪ್ರಕಟವಾಗಿರುವ ಸ್ಥಳೀಯ ಪ್ರಾಧಿಕಾರದ ದತ್ತಾಂಶವನ್ನು ಬಳಸಿಕೊಂಡು ಅಧ್ಯಯನ ನಡೆಸಿ, ಈ ನಿರ್ಣಯಕ್ಕೆ ಬರಲಾಗಿದೆ ಎಂದು ಸಂಶೋಧಕರು ತಿಳಿಸಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರತಿ ಸ್ಥಳೀಯ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೊರೊನಾ ದೃಢಪಟ್ಟ ಒಬ್ಬ ವ್ಯಕ್ತಿಯಿಂದ ಸೋಂಕಿತ ಜನರ ಸಂಖ್ಯೆ, ಆರ್-ಮೌಲ್ಯವನ್ನು ಲೆಕ್ಕ ಮಾಡಲು ಸಂಶೋಧಕರಿಗೆ ಅನುವು ಮಾಡಿಕೊಟ್ಟಿತು.
ತಂಡವು 144 ಸ್ಥಳೀಯ ಅಧಿಕಾರಿಗಳು ಪ್ರಕಟಿಸಿರುವ ಕೇಸ್ ಡೇಟಾವನ್ನು ವಿಶ್ಲೇಷಿಸಿದ್ದು, ಇದು ಒಂದಕ್ಕಿಂತ ಕಡಿಮೆ ಮೌಲ್ಯದ ಆರ್ ಮೌಲ್ಯವನ್ನು ನೀಡಿತು ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ವಿಶ್ವವಿದ್ಯಾನಿಲಯದ ಪ್ರಕಾರ, ಮಾರ್ಚ್ 2020 ರ ಮಧ್ಯದಲ್ಲಿ ಕೊರೊನಾ ಸೋಂಕು ಏಕಾಏಕಿ ಪ್ರಾರಂಭವಾದಾಗ ಅದರ ಮೌಲ್ಯವು ಮೂರಕ್ಕಿಂತ ಹೆಚ್ಚಿತ್ತು, ನಂತರ ಸಂಚಿತ ಸಮುದಾಯ ಸೋಂಕಿನ ಸ್ವಾಭಾವಿಕ ಪರಿಣಾಮಗಳೊಂದಿಗೆ ಸಾಮಾಜಿಕ ಅಂತರದ ಪರಿಣಾಮವಾಗಿ ಕುಸಿಯಿತು.
ಏಪ್ರಿಲ್ ದ್ವಿತೀಯಾರ್ಧದ ವೇಳೆಗೆ, ಕೊರೋನಾ ಸೋಂಕು ಪತ್ತೆಯಾದ ಪ್ರಕರಣಗಳ ಸಂಖ್ಯೆಯ ಆಧಾರದ ಮೇಲೆ ಸ್ಥಳೀಯ ಪ್ರಾಧಿಕಾರಗಳ ವರದಿಗಳಲ್ಲಿ ವ್ಯತ್ಯಾಸವಿರುವುದು ಕಂಡು ಬಂತು. ಹಾಗಾಗಿ ಬ್ರಿಟನ್‌ನ ಜನಸಂಖ್ಯೆಯ 25 ಪ್ರತಿಶತಕ್ಕೂ ಹೆಚ್ಚು ಜನರಿಗೆ ಈಗಾಗಲೇ ಕೊರೊನಾ ವೈರಸ್ ಸೋಂಕು ತಗುಲಿರಬಹುದು ಎಂದು ತಂಡವು ಕಂಡುಹಿಡಿದಿದೆ
ಕೊರೊನಾ ಸಾಂಕ್ರಾಮಿಕ ವೈರಸ್ ಸಣ್ಣ ಗುಂಪಿನ ಜನರಿಗೆ ಬಹಳ ಅಪಾಯಕಾರಿಯಾಗಿದ್ದು, ದೊಡ್ಡ ಗುಂಪಿನ ಜನರಲ್ಲಿ ಕಡಿಮೆ ಲಕ್ಷಣಗಳು ಅಥವಾ ಯಾವುದೇ ಲಕ್ಷಣಗಳು ಇಲ್ಲದೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಆಡ್ರಿಯನ್ ಹೀಲ್ಡ್ , ವಿಶ್ವವಿದ್ಯಾಲಯದ ಮ್ಯಾಂಚೆಸ್ಟರ್ ಹೇಳಿದ್ದಾರೆ.
ಲಾಕ್ ಡೌನ್ ನಿಯಮ ಮತ್ತು ಸಾಮಾಜಿಕ ಅಂತರ ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೀಲ್ಡ್ ಹೇಳಿದ್ದಾರೆ.
ಲಾಕ್ ಡೌನ್ ನಿಂದ ದೇಶದ ಅರ್ಥಿಕತೆಗೆ ಮತ್ತಷ್ಟು ಹಾನಿಯಾಗುವುದರಿಂದ ಅದನ್ನು ದೀರ್ಘ ಕಾಲ ಮುಂದುವರಿಸಲು ಸಾಧ್ಯವಿಲ್ಲ. ಆದರೂ ಪ್ರಸ್ತುತ ಸನ್ನಿವೇಶದಲ್ಲಿ ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಅಂದು ಅವಹೇಳನ ಇಂದು ಆಶ್ರಯ: ನಂದನ್ ನಿಲೇಕಣಿ ವಿಚಾರದಲ್ಲಿ ಪ್ರಧಾನಿ ಮೋದಿಯವರ ಅವಕಾಶವಾದಿ ರಾಜಕೀಯವನ್ನು ಪ್ರಶ್ನಿಸಿದ ಬಿ.ಕೆ.ಹರಿಪ್ರಸಾದ್
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕತ್ವದ ದ್ವಂದ್ವ ನಿಲುವನ್ನು ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ತೀವ್ರವಾಗಿ ತರಾಟೆಗೆ...








