ನಾವು ರೆಸಾರ್ಟ್, ನಾಲ್ಕು ಗೋಡೆ ಮಧ್ಯ ಮಾತನಾಡುವುದಿಲ್ಲ : ರೇಣುಕಾಚಾರ್ಯ
ದಾವಣಗೆರೆ : ನಾವು ರೆಸಾರ್ಟ್, ನಾಲ್ಕು ಗೋಡೆ ಮಧ್ಯ ಮಾತನಾಡುವುದಿಲ್ಲ. ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ.
ನಾನು ಪಕ್ಷ ಅಧಿಕಾರಕ್ಕೆ ಬರಲು ಅಮಾಲಿ ಕೆಲಸ ಮಾಡಿದ್ದೇನೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಸಚಿವ ಸ್ಥಾನದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನಾವು ಬಿಜೆಪಿ ಅಧಿಕಾರಕ್ಕೆ ಬರಲು ಸಾಕಷ್ಟು ಕೆಲಸ ಮಾಡಿದ್ದೇವೆ.
ಬೇರೆ ಬೇರೆ ಪಕ್ಷಗಳಿಂದ ಬಂದವರಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಆದ್ರೆ ಪದೇ ಪದೇ ಅವರೇ ಸಚಿವರಾಗುತ್ತಿದ್ದಾರೆ.
ಹೀಗಾಗಿ ಹೊಸ ಮುಖಗಳಿಗೆ ಅವಕಾಶ ನೀಡಿ ಎಂದು ವರಿಷ್ಠರಲ್ಲಿ ಕೇಳಿದ್ದೇವೆ. ನಾವು ರೆಸಾರ್ಟ್, ನಾಲ್ಕು ಗೋಡೆ ಮಧ್ಯ ಮಾತನಾಡುವುದಿಲ್ಲ.
ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿರುವುದಕ್ಕೆ ಬೇಸರ ಹೊರಹಾಕಿದ ರೇಣುಕಾಚಾರ್ಯ, ಹಣ ಬಿಡುಗಡೆ ಮಾಡಲು ಆಗುತ್ತಿಲ್ಲ, ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತನ್ನ ಸರ್ಕಾರದ ವಿರುದ್ಧವೇ ಅಸಮಾಧಾನ ತೋಡಿಕೊಂಡರು.