ರಾಯ್ ಪುರ, ಮೇ 17: ರಾಯ್ ಪುರದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ತಂಡ ಆಸ್ಪತ್ರೆಯೂ ಸೇರಿದಂತೆ ಆರೋಗ್ಯ ಕಾಳಜಿ ಸಂಸ್ಥೆಗಳ ಒಳಗೆ ಮೊಬೈಲ್ ಫೋನ್ ತರುವುದನ್ನು ನಿಷೇಧಿಸುವಂತೆ ಸಲಹೆ ನೀಡಿದೆ.
ಮೊಬೈಲ್ ಪೋನ್ ಗಳು ಕೊರೊನಾ ಸೋಂಕು ಹರಡುವಲ್ಲಿ ಪ್ರಮುಖ ಪಾತ್ರ ವಹಿಸುವ ಕಾರಣ ಆಸ್ಪತ್ರೆಯೂ ಸೇರಿದಂತೆ ಯಾವುದೇ ಆರೋಗ್ಯ ಕಾಳಜಿ ಸಂಸ್ಥೆಗಳ ಒಳಗೆ ಮೊಬೈಲ್ ಫೋನ್ ತರುವುದನ್ನು ನಿಷೇಧಿಸುವಂತೆ ವೈದ್ಯರ ತಂಡ ಹೇಳಿದೆ. ಮೊಬೈಲ್ ಗಳ ಮೂಲಕ ಕೊರೊನಾ ವೈರಸ್ ಆಸ್ಪತ್ರೆಯಿಂದ ಹೊರಗೆ ಹರಡುವ ಸಾಧ್ಯತೆ ಒಂದೆಡೆಯಾದರೆ, ಮೊಬೈಲ್ ಗಳ ಮೂಲಕ ಹೊರಗಿನಿಂದ ಕೂಡ ವೈರಸ್ ಆಸ್ಪತ್ರೆ ಪ್ರವೇಶಿಸಿ ಆರೋಗ್ಯ ಸಿಬ್ಬಂದಿಗಳಿಗೆ ಸೋಂಕು ತಗುಲುವ ಸಂಭವವಿದೆ. ವೈರಾಣುಗಳು ಮೊಬೈಲ್ ಗಳಿಗೆ ಅಂಟಿಕೊಳ್ಳುವುದರಿಂದ, ನಾವು ನಮ್ಮ ಮುಖ ಅಥವಾ ಬಾಯಿಯ ಸಮೀಪ ಮೊಬೈಲ್ ಹಿಡಿಯುವುದರಿಂದ ಕೊರೊನಾ ಸೋಂಕಿಗೆ ಒಳಗಾಗುವ ಸಂಭವವಿರುತ್ತದೆ.
ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅದರಲ್ಲಿ ಮೊಬೈಲ್ ಫೋನ್ ನಿಷೇಧದ ಬಗ್ಗೆ ಪ್ರಸ್ತಾಪವಿಲ್ಲ. ಆದರೆ ಗ್ಲೌಸ್, ಮಾಸ್ಕ್ ಮತ್ತಿತರ ಸಾಧನಗಳಂತೆ ಮೊಬೈಲ್ ಫೋನ್ ಗಳನ್ನು ಬಳಸಿ ಎಸೆಯಲು ಸಾಧ್ಯವಿಲ್ಲ. ಹಾಗಾಗಿ ಮೊಬೈಲ್ ಬಳಕೆ ಬಹಳ ಅಪಾಯಕಾರಿ ಎಂದು ವೈದ್ಯರ ತಂಡ ತಿಳಿಸಿದೆ.
ಕಾರ್ಮಿಕರ ಬವಣೆ ಆಲಿಸಿದ CM ಡಿಕೆ ಶಿವಕುಮಾರ್ ಶೈಲಿಗೆ ಹೈಕೋರ್ಟ್ ಫಿದಾ: ಡಿಕೆಶಿ ಎಪಿಎಂಸಿ ಭೇಟಿ ಗಿಮಿಕ್ ಅಲ್ಲ ಇದು ಗ್ರೇಟ್ ಜಾಬ್
ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇತ್ತೀಚೆಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ನೀಡಿದ ಅನಿರೀಕ್ಷಿತ ಭೇಟಿ ಮತ್ತು ಅಲ್ಲಿನ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಈಗ...








