ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ 2 ನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ 2 ರನ್ ಗಳಿಂದ ರೋಚಕ ಜಯ ಸಾಧಿಸಿದೆ. ಡರ್ಬನ್‌ನ ಕಿಂಗ್ಸ್ ಮೇಡ್ ಮೈದಾನದಲ್ಲಿ ನಡೆದ ಎರಡನೇ ಟಿ-20 ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತು. ಜೋಸ್ ಬಟ್ಲರ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಬಳಿಕ ಜೇಸನ್ ರಾಯ್ (40 ರನ್) ಜಾನಿ ಬೈರ್ ಸ್ಟೋ( 35ರನ್) ಗಳಿಸಿ ತಂಡಕ್ಕೆ ಚೇತರಿಗೆ ನೀಡಿದ್ರು. ಅಂತಿಮ ಹಂತದಲ್ಲಿ ಬೆನ್ ಸ್ಟೋಕ್ಸ್ ಹಾಗೂ ಆರ್ ಸಿಬಿ ಆಲ್ರೌಂಡರ್ ಆಟಗಾರ ಮೊಯೀನ್ ಅಲಿ ಬೌಂಡರಿ-ಸಿಕ್ಸರ್ ಗಳ ಮಳೆ ಸುರಿಸಿದರು. ಅದರಲ್ಲು ಮನಬಂದಂತೆ ಬ್ಯಾಟ್ ಬೀಸಿದ ಅಲಿ ಕೇವಲ 11 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಿಡಿಸಿ 39 ರನ್ ಚಚ್ಚಿದರು. ಈ ಮೂಲಕ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು.
ಅಂತಿಮವಾಗಿ ಇಂಗ್ಲೆಂಡ್ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತು. ಈ ಟಾರ್ಗೆಟ್ ಬೆನ್ನಟ್ಟಿದ ದ. ಆಫ್ರಿಕಾ, ತೆಂಬಾ ಬವುಮಾ ಹಾಗೂ ನಾಯಕ ಕ್ವಿಂಟನ್ ಡಿಕಾಕ್ ಭರ್ಜರಿ ಬ್ಯಾಟಿಂಗ್, ಡಸ್ಸೆನ್ ರ 46 ರನ್ ಗಳ ಅಜೇಯ ಹೋರಾಟದ ನಡುವೆಯೂ ಪಂದ್ಯವನ್ನು ಕೈ ಚೆಲ್ಲಿತು.
ಇನ್ನು ಈ ಪಂದ್ಯದಲ್ಲಿ ಮೊಯಿನ್ ಅಲಿ ಅವರ ಅಬ್ಬರದ ಬ್ಯಾಟಿಂಗ್ ಆರ್ ಸಿಬಿ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ.
ಭಾರತದ ಲಂಕಾ ಪ್ರವಾಸ – ಧೋನಿಯ ಮಾರ್ಗದರ್ಶನ ಪಡೆದ ರಿಷಪ್ ಪಂತ್..!
ಫಿಯರ್ಲೆಸ್ ಕ್ರಿಕೆಟರ್ ರಿಷಬ್ ಪಂತ್ ಶ್ರೀಲಂಕಾ ಪ್ರವಾಸಕ್ಕೆ ರೆಡಿಯಾಗುತ್ತಿದ್ದಾರೆ. ಅಪಘಾತ, ಸತತ ಗಾಯ, ಸ್ಥಿರ ಪ್ರದರ್ಶನದ ಕೊರತೆಯ ನಡುವೆಯೂ ಪಂತ್ ಟೀಮ್ ಇಂಡಿಯಾದ ಟೆಸ್ಟ್ ತಂಡದ ಆಧಾರಸ್ತಂಭವಾಗಿದ್ದಾರೆ....








