ಹಾಸನ ಜಿಲ್ಲೆಯಲ್ಲಿ 198 ವಿದ್ಯಾರ್ಥಿಗಳಿಗೆ, 70 ಶಿಕ್ಷಕರಿಗೆ ಕೊರೊನಾ
ಹಾಸನ : ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ವೇಗ ಪಡೆದುಕೊಂಡು ಮುನ್ನುಗ್ಗುತ್ತಿದೆ.
ನಿನ್ನೆ ಜಿಲ್ಲೆಯಲ್ಲಿ 1000ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ಇದೀಗ ಕೊರೊನಾ ಸೋಂಕು ಪೊಲೀಸರು, ಪತ್ರಕರ್ತರು, ಶಿಕ್ಷಕರು, ವಿದ್ಯಾರ್ಥಿಗಳಿಗೂ ವಕ್ಕರಿಸಿದ್ದು, ಜಿಲ್ಲೆಯಲ್ಲಿ 198 ವಿದ್ಯಾರ್ಥಿಗಳಿಗೆ, 70 ಶಿಕ್ಷಕರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ಅಲ್ಲದೇ 24 ಪೊಲೀಸರು, 4 ಪತ್ರಕರ್ತರಲ್ಲೂ ಸೋಂಕು ಕಾಣಿಸಿಕೊಂಡಿದೆ.
ಕೊರೊನಾ ಸೋಂಕು ಹೆಚ್ಚಾದ ಕಾರಣ ಜಿಲ್ಲೆಯಲ್ಲಿ ಈಗಾಗಲೇ ಒಂದು ಖಾಸಗಿ ಇಂಜಿನಿಯರಿಂಗ್ ಕಾಲೇಜು, ಒಂದು ಸರ್ಕಾರಿ ಇಂಜಿನಿಯರಿಂಗ್, ಒಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಒಂದು ವಾರ ರಜೆ ಘೋಷಣೆ ಮಾಡಲಾಗಿದೆ.









