ಕಿಚ್ಚು ಹಾಯುವ ವೇಳೆ ಬೆಂಕಿಗೆ ಬಿದ್ದ ಬಾಲಕ
ಬೆಂಗಳೂರು: ನಿನ್ನೆ ವೀಕೆಂಡ್ ಕರ್ಫೂ ಸಂದರ್ಭದಲ್ಲಿಯೂ ಸಂಕ್ರಾಂತಿ ಹಬ್ಬವನ್ನು ರಾಜ್ಯದ ಹಲವೆಡೆ ಸರಳವಾಗಿ ಆಚರಿಸಲಾಗಿದೆ. ಇನ್ನು ಕೆಲವೆಡೆ ಕರ್ಫೂ ನಿಯಮ ಉಲ್ಲಂಘಿಸಿ, ಜೋರಾಗಿ ಆಚರಿಸಲಾಗಿತ್ತು. ಹಬ್ಬದ ನಿಮಿತ್ತ ಕಿಚ್ಚು ಹಾಯಿಸೋ ಸಂದರ್ಭದಲ್ಲಿಯೇ ಬಾಲಕನೊಬ್ಬ ಬೆಂಕಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿರೋ ಘಟನೆ, ಬೆಂಗಳೂರಿನ ಉತ್ತರ ತಾಲೂಕಿನ ಹೆಸರುಘಟ್ಟದಲ್ಲಿ ನಡೆದಿದೆ.
ನಿನ್ನೆ ವೀಕೆಂಡ್ ಕರ್ಪ್ಯೂ ಸಂದರ್ಭದಲ್ಲಿಯೂ ನಿಯಮ ಉಲ್ಲಂಘಿಸಿ ಸಂಕ್ರಾಂತಿಯ ದಿನವಾದ ಕಾರಣ, ಕಿಚ್ಚು ಹಾಯಿಸೋ ಸಂಪ್ರದಾಯವನ್ನು ನಡೆಸಲಾಗಿದೆ. ಬಾಲಕನು ಕೂಡಾ ಕಿಚ್ಚು ಹಾದಿದ್ದು, ಕಿಚ್ಚಿನ ಮಧ್ಯೆ ಬಿದ್ದಿದ್ದಾನೆ. ಇದರಿಂದ ತೀರ್ವ ಗಾಯಗೊಂಡಿದ್ದು, ಜನರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಎಲ್ಲಾ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.








