144 ವರ್ಷಗಳಷ್ಟು ಕಟ್ಟಡ ಬೆಂಕಿಗಾಹುತಿ Saaksha Tv
ಹೈದರಾಬಾದ್: ದೇಶದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾದ ತೆಲಂಗಾಣದ ಸಿಕಂದರಾಬಾದ್ ಕ್ಲಬ್‌ನಲ್ಲಿ ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಈ ಕಟ್ಟಡವು 144 ವರ್ಷಗಳಷ್ಟು ಹಳೆಯದಾದ ಕಟ್ಟಡವಾಗಿದೆ. ಆದರೆ ಈಗ ಸುಟ್ಟು ಭಸ್ಮವಾಗಿದೆ. ಮುಂಜಾನೆ ಪಾರಂಪರಿಕ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಷಯ ತಿಳಿದ ಅಗ್ನಿಶಾಮಕ ದಳ ತಕ್ಷಣವೇ 10 ಅಗ್ನಿಶಾಮಕ ವಾಹನಗಳೊಂದಿಗೆ ಕಟ್ಟಡಕ್ಕೆ ಧಾವಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸುಮಾರು 3-4 ಗಂಟೆ ಬೇಕಾಯಿತು. ಇಡೀ ಕ್ಲಬ್ ಬೂದಿಯಾಯಿತು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹೇಳಿದರು.
ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಶನಿವಾರ ಕ್ಲಬ್ ಮುಚ್ಚಲಾಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದು, ಆವರಣದಲ್ಲಿ “ಬಹಳಷ್ಟು ದಹಿಸುವ ವಸ್ತುಗಳು” ಇರುವುದರಿಂದ ಬೆಂಕಿಯನ್ನು ನಂದಿಸಲು ಸಾಕಷ್ಟು ಹರಸಾಹಸ ಪಡಬೇಕಾಯಿತು ಎಂದು ತಿಳಿಸಿದ್ದಾರೆ.
1878 ರಲ್ಲಿ ಬ್ರಿಟಿಷರು ಸ್ಥಾಪಿಸಿದ ಕ್ಲಬ್ ಭಾರತದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾಗಿದೆ ಎಂದು ಪ್ರಸಿದ್ಧ ಪರಂಪರೆ ಸಂರಕ್ಷಣಾವಾದಿ ಅನುರಾಧಾ ರೆಡ್ಡಿ ಮತ್ತು ಸಿಕಂದರಾಬಾದ್ ಕ್ಲಬ್‌ನ ಸದಸ್ಯೆ ಹೇಳಿದರು.









