ಭಾರತದ ಅತಿ ದೊಡ್ಡ ಖಾದಿ ಧ್ವಜ ಅನಾವರಣ
ಜೈಪುರ: ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವಿಶ್ವದಲ್ಲೇ ಅತೀ ದೊಡ್ಡ ಭಾರತದ ಖಾದಿ ರಾಷ್ಟ್ರಧ್ವಜವನ್ನು 74ನೇ ಸೇನಾ ದಿನಚಾರಣೆಯ ಪ್ರಯುಕ್ತ ಅನಾವರಣಗೊಳಿಸಿಲಾಗಿದೆ.
1971ರಲ್ಲಿ ಭಾರತ-ಪಾಕಿಸ್ತಾನ ನಡುವೆ ರಾಜಸ್ಥಾನದ ಲೋಂಗೇವಾಲಾ ಗಡಿಯಲ್ಲಿ ಯುದ್ಧ ನಡೆದಿತ್ತು. ಹಾಗಾಗಿ ಈ ಪ್ರದೇಶದಲ್ಲಿ ವಿಶ್ವದ ಅತೀ ದೊಡ್ಡ ಭಾರತದ ಧ್ವಜವನ್ನು ಶನಿವಾರ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಧ್ವಜವು 225 ಅಡಿ ಉದ್ದ, 150 ಅಡಿ ಅಗಲದ ಹಾಗೂ 1,400 ಕೆಜಿ ಭಾರವಿದೆ. ಇದನ್ನು ಖಾದಿಯಿಂದ ತಯಾರಿಸಲಾಗಿದೆ.
ಈ ಸಾರ್ವಜನಿಕ ಪ್ರದರ್ಶನವು ಧ್ವಜದ ಐದನೇ ಪ್ರದರ್ಶನವಾಗಿದೆ, ಕಳೆದ ವರ್ಷ ಗಾಂಧಿ ಜಯಂತಿಯ ಸಂದರ್ಭದಲ್ಲಿ ಲೇಹ್‌ನಲ್ಲಿ ಉದ್ಘಾಟಿಸಲಾಯಿತು. “ಅದರ ಎರಡನೇ ಸಾರ್ವಜನಿಕ ಪ್ರದರ್ಶನವು 8ನೇ ಅಕ್ಟೋಬರ್ 2021 ರಂದು ವಾಯುಪಡೆ ದಿನದಂದು ಹಿಂಡನ್ ವಾಯುನೆಲೆಯಲ್ಲಿ, ಮೂರನೆಯದು ಅಕ್ಟೋಬರ್ 21 ರಂದು ಕೆಂಪು ಕೋಟೆಯಲ್ಲಿ, ರಾಷ್ಟ್ರವು 100 ಕೋಟಿ ಕೋವಿಡ್ -19 ಲಸಿಕೆಗಳನ್ನು ಪೂರ್ಣಗೊಳಿಸಿದಾಗ ಮತ್ತು ಡಿಸೆಂಬರ್ 4 ರಂದು, ನೌಕಾಪಡೆಯ ದಿನದಂದು ಗೇಟ್‌ವೇ ಆಫ್ ಇಂಡಿಯಾ ಬಳಿ ಇದನ್ನು ಪ್ರದರ್ಶಿಸಲಾಯಿತು ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಶುಕ್ರವಾರ ಹೇಳಿದೆ.
ಧ್ವಜವನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ತಯಾರಿಸಿದೆ. ಇದನ್ನು ತಯಾರಿಸಲು 70 ಖಾದಿ ಕುಶಲಕರ್ಮಿಗಳು 49 ದಿನಗಳನ್ನು ತೆಗೆದುಕೊಂಡಿದ್ದಾರೆ. ಇದರ ತಯಾರಿಸಲು ಖಾದಿ ಕುಶಲಕರ್ಮಿಗಳು ಸುಮಾರು 3500 ಗಂಟೆ ಕೆಲಸ ಮಾಡಡಿದ್ದಾರೆ. ಒಟ್ಟು 33, 750 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಧ್ವಜವನ್ನು ತಯಾರಿಸಲು 4500 ಮೀಟರ್ ಕೈಯಿಂದ ನೇಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.









