ಮದ್ಯ ಖರೀದಿಗೆ ಹಣ ಕೊಡದ ಗರ್ಭಿಣಿ ಪತ್ನಿಯ ಪ್ರಾಣ ತೆಗೆದ ನೀಚ..
ಮದ್ಯ ಖರೀದಿಗೆ ಹಣ ಕೊಡದೇ ಹೋಗಿದ್ದಕ್ಕೆ ಗರ್ಭಿಣಿ ಮಹಿಳೆಯನ್ನ ಆಕೆಯ ಪತಿಯೇ ಕೊಲೆ ಮಾಡಿರುವ ಘಟನೆ ಜಾರ್ಖಂಡ್‍ನ ಛತ್ರಾ ಜಿಲ್ಲೆಯ ಗ್ರಾಮವೊಂದ್ರಲ್ಲಿ ನಡೆದಿದೆ.. ಪ್ರಿಯಾ ದೇವಿ ಮೃತಳಾಗಿದ್ದಾಳೆ. ತಿಲೇಶ್ವರ ಗಂಜು ಆರೋಪಿ ಪತಿಯಾಗಿದ್ದಾನೆ. ತಿಲೇಶ್ವರ್ ಕಳೆದ ವರ್ಷ ಮೇ 25ರಂದು ಪ್ರಿಯಾ ದೇವಿಯನ್ನು ಮದುವೆಯಾಗಿದ್ದ. ಕುಡಿತದ ಚಟಕ್ಕೆ ಬಿದ್ದ ಈತ ಹಣಕ್ಕಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.
ನಿತ್ಯ ಕಂಠ ಪೂರ್ತಿ ಕುಡಿದು ಬರುತ್ತಿದ್ದ ಈತ ಗರ್ಭಿಣಿ ಪತ್ನಿಯನ್ನ ಹೊಡೆದು ಬಡೆದು ಚಿತ್ರ ಹಿಂಸೆ ನೀಡ್ತಿದ್ದ ಎನ್ನಲಾಗಿದೆ.. ಹೀಗೆ ಒಂದು ದಿನ ಪತ್ನಿಯಿಂದ ಮದ್ಯ ಖರೀದಿಗೆ ಹಣಕ್ಕಾಗಿ ಹಿಂಸೆ ನೀಡಿದ್ದಾನೆ.. ಗಲಾಟೆ ಮಾಡಿ ಕಡೆಗೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.. ಪ್ರಿಯಾ 7 ತಿಂಗಳ ಗರ್ಭಿಣಿಯಾಗಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಿಲೇಶ್ವರನನ್ನು ಬಂಧಿಸಿದ್ದಾರೆ.








