ವಾಷಿಂಗ್ಟನ್, ಮೇ 17 : ಜಗತ್ತಿನಾದ್ಯಂತ ಕೊರೊನಾ ಸೋಂಕು ವ್ಯಾಪಿಸಿರುವುದಕ್ಕೆ ಚೀನಾ ಸರಕಾರವನ್ನು ಹೊಣೆಗಾರನನ್ನಾಗಿ ಮಾಡಲು ಅಮೆರಿಕ ಚಿಂತನೆ ನಡೆಸಿದೆ. ಈ ಸಂಬಂಧ 18 ಅಂಶಗಳ ಯೋಜನೆಯೊಂದನ್ನು ಅಮೆರಿಕ ಸಿದ್ಧಪಡಿಸಿದ್ದು, ಅದರಲ್ಲಿ ಭಾರತದೊಂದಿಗೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳುವ ಅಂಶವೂ ಸೇರಿದೆ.
ಪ್ರಾರಂಭದಿಂದಲೂ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಸುಳ್ಳನ್ನೇ ಹೇಳುತ್ತಾ, ಸೋಂಕಿನ ಗಂಭೀರತೆಯನ್ನು ಮುಚ್ಚಿಡುತ್ತಾ ಬಂದ ಚೀನಾ ಜಗತ್ತಿನಾದ್ಯಂತ ಸೋಂಕು ವ್ಯಾಪಿಸಲು ಕಾರಣವಾಗಿದೆ. ಇಂದು ಜಗತ್ತಿನಲ್ಲಿ ಕೊರೊನಾ ವೈರಸ್ ನಿಂದ ಉಂಟಾಗಿರುವ ಅಪಾರ ಸಾವು ನೋವಿಗೆ ಚೀನಾವೇ ಕಾರಣವಾಗಿದೆ. ಹಲವಾರು ಸತ್ಯಗಳನ್ನು ಜಗತ್ತಿನಿಂದ ಬಚ್ಚಿಡುವ ಮೂಲಕ ಚೀನಾ ಪ್ರಪಂಚಕ್ಕೆ ದ್ರೋಹ ಮಾಡಿದೆ. ಚೀನಾ ಮಾಡಿರುವ ಮೋಸದಿಂದ ಲಕ್ಷಾಂತರ ಅಮೆರಿಕನ್ನರು ಸೇರಿದಂತೆ ಕೋಟ್ಯಂತರ ಜನ ಸಂಕಷ್ಟ ಅನುಭವಿಸಿದ್ದಾರೆ ಎಂದು ಸೆನೆಟರ್ ಥಾಮ್ ಟಿಲ್ಲಿಸ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಅಮೆರಿಕದ ತಂತ್ರಜ್ಞಾನ ಮತ್ತು ಉದ್ಯೋಗಗಳನ್ನು ಕದ್ದು, ನಮ್ಮ ಮಿತ್ರ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಉತ್ಪಾದನಾ ಸರಪಳಿಯಿಂದ ಚೀನಾವನ್ನು ಹೊರಗಿಟ್ಟು, ಭಾರತ, ವಿಯೆಟ್ನಾಂ ಮತ್ತು ತೈವಾನ್ ಗಳ ಜೊತೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳುವುದು, ಚೀನಾವನ್ನು ಕೊರೊನಾ ಸೋಂಕು ಜಗತ್ತಿಗೆ ಹರಡಿರುವುದಕ್ಕೆ ಹೊಣೆಯಾಗಿಸುವುದು ಸೇರಿದಂತೆ 18 ಅಂಶಗಳ ಒಪ್ಪಂದ ಮಾಡಿಕೊಳ್ಳಲು ಯೋಜನೆಯನ್ನು ಸಿದ್ಧ ಪಡಿಸಿದೆ.
Bng – ವೈಟ್ಫೀಲ್ಡ್ನ ಪಾರ್ಸೆಕ್ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!
• ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ಯಾಲರಿ ಉದ್ಘಾಟನೆ * ವಾಸ್ತವ ಟ್ರಾಫಿಕ್ ಪರಿಸ್ಥಿತಿಯ ಪ್ರಾಯೋಗಿಕ ಕಲಿಕೆ * 'ಟ್ರಾಫಿಕ್ ಡಿಸೈನ್ ಚಾಲೆಂಜ್'ನ ಸಬ್ಮಿಷನ್ ಮುಕ್ತಾಯ * ಮುಂದಿನ...








