ಪಂಡಿತ್ ಬಿರ್ಜೂ ಮಹಾರಾಜ್ ವಿಧಿವಶ
ನವದೆಹಲಿ: ಲೆಜೆಂಡರಿ ಕಥಕ್ ನೃತ್ಯಗಾರ, ಪಂಡಿತ್ ಬಿರ್ಜೂ ಮಹಾರಾಜ್ ವಿಧಿವಶರಾಗಿದ್ದಾರೆ.
83 ವರ್ಷದ ಬಿರ್ಜೂ ಮಹಾರಾಜ್ ಅವರು ತಮ್ಮ ನಿವಾಸದಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರಾಗಿದ್ದ ಮಹಾರಾಜ್ ಜೀ, ಕಲಾದೇವಿಗೆ ನೀಡಿದ ಸೇವೆ ಅಪಾರವಾಗಿದೆ.
ಬಿರ್ಜೂ ಅವರನ್ನು ಪಂಡಿತ್-ಜಿ, ಮಹಾರಾಜ್-ಜಿ ಎಂದು ಅವರ ಶಿಷ್ಯರು ಮತ್ತು ಅನುಯಾಯಿಗಳು ಕರೆಯುತ್ತಿದ್ದರು. ಬಿರ್ಜೂ ಅವರ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಬಿರ್ಜು ಮಹಾರಾಜ್ ಅವರು ಫೆಬ್ರವರಿ 4, 1937 ರಂದು ಕಥಕ್ ಪ್ರತಿಪಾದಕ ಜಗನ್ನಾಥ ಮಹಾರಾಜ್ ಅವರ ಮನೆಯಲ್ಲಿ ಜನಿಸಿದರು.
ಜಗನ್ನಾಥ ಮಹಾರಾಜ್ ಉತ್ತರಪ್ರದೇಶದ ಲಖನೌ ಘರಾನಾದ ಅಚ್ಚನ್ ಮಹಾರಾಜ್ ಎಂದೇ ಜನಪ್ರಿಯರಾಗಿದ್ದರು.
ಅವರು ರಾಯಗಢ ರಾಜಪ್ರಭುತ್ವದ ರಾಜ್ಯದಲ್ಲಿ ಆಸ್ಥಾನ ನೃತ್ಯಗಾರರಾಗಿ ಸೇವೆ ಸಲ್ಲಿಸಿದ್ದರು.
ಬಿರ್ಜೂ ಅವರು 28 ನೇ ವಯಸ್ಸಿನಲ್ಲಿ ಅಸ್ಕರ್ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.









