ಗಿನ್ನಿ ಚತ್ರತ್‌ಗೆ ಪ್ರಪೋಸ್ ಮಾಡುವಾಗ ನಾನು ಕುಡಿದಿದ್ದೆ – ಕಪಿಲ್ ಶರ್ಮಾ
ಹಾಸ್ಯ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರತ್ ಮದುವೆಯಾಗಿ ಮೂರು ವರ್ಷಗಳಾಗಿವೆ ಮತ್ತು ಇಬ್ಬರು ಮಕ್ಕಳಿದ್ದಾರೆ. ಮುರು ವರ್ಷಗಳ ನಂತರ ಮೊದಲ ಭಾರಿಗೆ ಈ ಜೊಡಿ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
ಗಿನ್ನಿ, ಕಪಿಲ್ ಇಬ್ಬರೂ ಒಟ್ಟಿಗೆ ರಂಗಭೂಮಿಯಲ್ಲಿ ಕೆಲಸಮಾಡುತ್ತಿದ್ದರು. ಕಪಿಲ್ ಒಂದು ದಿನ ಕುಡಿದ ನಂತರವೇ ಗಿನ್ನಿಗೆ ಪ್ರಪೋಸ್ ಮಾಡುವಷ್ಟು ಧೈರ್ಯ ಬಂತು ಎನ್ನುವುದನ್ನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ನೆಟ್‌ಫ್ಲಿಕ್ಸ್ ನಲ್ಲಿ ಬರಲಿರುವ : ಐಯಾಮ್ ನಾಟ್ ಡನ್ ಯೆಟ್ ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಭಾಗವಹಿಸಿದ್ದಾರೆ. ಕಪಿಲ್ ಶರ್ಮಾ ಅವರ ಹೊಸ ಪ್ರೋಮೋದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿದೆ, ಕಪಿಲ್ ತಾನು ಗಿನ್ನಿಗೆ ಕುಡಿದು ಪ್ರಪೋಸ್ ಮಾಡಿರುವುದಾಗಿ ಬಹಿರಂಗಪಡಿಸಿದ್ದಾರೆ.
“ಒಂದು ದಿನ, ಅವಳು ನನಗೆ ಕರೆ ಮಾಡಿದಾಗ ನಾನು ಆಫೀಸರ್ಸ್ ಚಾಯ್ಸ್ (ವಿಸ್ಕಿ ಬ್ರಾಂಡ್) ಕುಡಿದಿದ್ದೆ.! ನಾನು ಕಾಲ್ ರಿಸೀವ್ ಮಾಡಿದ ನಂತರ ನಾನು ಕೇಳಿದೆ, “ನೀವು ನನ್ನನ್ನು ಪ್ರೀತಿಸುತ್ತೀರಾ?” ಅವಳು ಆಘಾತಕ್ಕೊಳಗಾದಳು ಮತ್ತು ‘ಏನು! ಯೇ ಆದ್ಮಿ ಮೆ ಹಿಮ್ಮತ್ ಕೈಸೆ ಆ ಗಯಿ (ಈ ಮನುಷ್ಯನಿಗೆ ಇಷ್ಟು ಧೈರ್ಯ ಹೇಗೆ ಬಂತು)?’ ಅಂತ ಅವಕ್ಕಾಗಿದ್ದಳು. ಆ ದಿನ ನಾನು ಟೋಡಿ ಕುಡಿಯಲಿಲ್ಲ ಇಲ್ಲದಿದ್ದರೆ ನನ್ನ ಪ್ರಶ್ನೆ, ‘ಗಿನ್ನಿ ತೇರೆ ಪಾಪಾ ಕೋ ಡ್ರೈವರ್ ಚಾಹಿಯೇ (ಗಿನ್ನಿ, ನಿಮ್ಮ ತಂದೆಗೆ ಡ್ರೈವರ್ ಬೇಕೇ)?” ಎಮದು ಇರುತ್ತಿತ್ತು ಎಂದು ಚಟಾಕಿ ಹಾರಿಸಿದ್ದಾರೆ.